ಸಿಂದಗಿ- ಕರ್ನಾಟಕ ಏಕೀಕರಣವಾದ ಬಳಿಕ ರಾಜ್ಯದ ಎಲ್ಲ ಕೂಲಿ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯ ಮೂಲಕ ಸೌಲಭ್ಯ ನೀಡಿ ಬಡ ಕುಟುಂಬಗಳಿಗೆ ಆಶಾಕಿರಣವಾದ ಮಾಜಿ ಸಿಎಂ ಡಿ.ದೇವರಾಜ ಅರಸು ಅವರಂತೆ ಛಾಯಾಚಿತ್ರಗ್ರಾಹಕರ ದೈನಂದಿನ ಸ್ಥಿತಿಯನ್ನು ಅರಿತು ಇಂದು ರಾಜ್ಯದ ಎಲ್ಲ ಛಾಯಾಚಿತ್ರಗ್ರಾಹಕರನ್ನು ಕಾರ್ಮಿಕ ಇಲಾಖೆ ಯೋಜನೆಯಡಿಗೆ ಸೇರ್ಪಡೆ ಮಾಡಿ ಸಿಎಂ ಸಿದ್ದರಾಮಯ್ಯನವರು ಛಾಯಾಚಿತ್ರಗ್ರಾಹಕರ ಕುಟುಂಬಗಳಿಗೆ ಹೊಸ ಇತಿಹಾಸ ಸೃಷ್ಟಿಸಿದ್ದಾರೆ ಎಂದು ಹಿರಿಯ ಛಾಯಾಗ್ರಾಹಕ ಪಂಡಿತ ಯಂಪೂರೆ ಶ್ಲಾಘಿಸಿದರು.
ಪಟ್ಟಣದ ಸಂಗಮೇಶ್ವರ ದೇವಸ್ಥಾನದಲ್ಲಿ ಸೆ.೨೦,೨೧,೨೨ ರಂದು ಕರ್ನಾಟಕ ಛಾಯಾಚಿತ್ರಗ್ರಾಹಕರ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಹಿನಿಯಲ್ಲಿ ನಡೆಯುತ್ತಿರುವ ೧೦ನೇ ವರ್ಷದ ಡಿಜೆ ಇಮೇಜ್ ಅಂತರರಾಷ್ಟ್ರೀಯ ಪ್ರದರ್ಶನದ ಕುರಿತು ಕರೆದ ತಾಲೂಕಾ ಛಾಯಾಗ್ರಾಹಕರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಇಡೀ ರಾಜ್ಯಾಧ್ಯಂತ ಛಾಯಾಗ್ರಾಹಕರ ಸಂಘಟನೆಗಳು ಚುರುಕುಗೊಂಡಿದ್ದು ಈ ಕಾರ್ಯವನ್ನು ಗಮನಿಸಿದ ಕಾರ್ಮಿಕ ಇಲಾಖೆ ಸಚಿವ ಸಂತೋಷ ಲಾಡ್ ಅವರು ಮುನ್ನೆ ನಡೆದ ಅಧಿವೇಶನದಲ್ಲಿ ಛಾಯಾಗ್ರಾಹಕರ ಸಂಘಟನೆಗಳು ನೀಡಿದ ಮನವಿಯನ್ನು ಸಿಎಂ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದರು ಅದಕ್ಕೆ ಸ್ಪಂಧಿಸಿ ಛಾಯಾಚಿತ್ರಗ್ರಾಹಕರನ್ನು ಕಾರ್ಮಿಕ ಇಲಾಖೆಗೆ ಸೇರ್ಪಡೆ ಮಾಡಿದ್ದು ಈ ಕುಟುಂಬಗಳು ಎಂದೂ ಮರೆಯುದಿಲ್ಲ ಎಂದ ಅವರು ರಾಜ್ಯ ಸಂಘಟನೆಯು ಸದಸ್ಯತ್ವ ಅಭಿಯಾನ ಪ್ರಾರಂಭಿಸಿದ್ದು ಎಲ್ಲರು ಸದಸ್ಯರಾಗಿ ಸರಕಾರ ನೀಡುವ ಸೌಲಭ್ಯ ಪಡೆದುಕೊಳ್ಳುವಂತೆ ಕರೆ ನೀಡಿದರು.
ತಾಲೂಕು ಅಧ್ಯಕ್ಷ ಪರಶುರಾಮ ಗೂಳೂರ ಮಾತನಾಡಿ, ರಾಜ್ಯ ಸಮಿತಿಯು ಪ್ರತಿ ಜಿಲ್ಲೆಯಲ್ಲಿ ಕಾರ್ಯಾಗಾರ ಮಾಡುವ ಯೋಜನೆ ರೂಪಿಸುತ್ತ ಛಾಯಾಚಿತ್ರಗ್ರಾಹಕರ ದೈನಂದಿನ ಸ್ಥಿತಿಯನ್ನು ಸುಧಾರಣೆ ಮಾಡಲು ಹೊಸ ಹೊಸ ಆವಿಷ್ಕಾರಗಳನ್ನು ಪರಿಚಯಿಸುತ್ತಿದ್ದಾರೆ ಅದಕ್ಕೆ ಎಲ್ಲರು ಪ್ರತಿಯೊಂದು ಕಾರ್ಯಾಗಾರದಲ್ಲಿ ಪಾಲ್ಗೊಂಡು ಇಂದಿನ ದಿನಮಾನಕ್ಕೆ ಅನುಗುಣವಾಗಿ ಪರಿಚಯಿಸುತ್ತಿರುವ ಹೊಸ ಹೊಸ ಕಂಪನಿಗಳ ಸಲಕರಣೆಗಳ ಮಾಹಿತಿ ಪಡೆದುಕೊಂಡು ವ್ಯಾಪಾರ ವಹಿವಾಟನ್ನು ಸುಧಾರಣೆ ಮಾಡಿಕೊಳ್ಳೋಣ ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ರವಿ ಕುಂಟೋಜಿ, ರಾಜು ಚಳ್ಳಗಿ, ಅಂಬ್ರಿಶ ಅಲ್ದಿ, ಪುಟ್ಟು ಸಂಗಮ, ಮೌನೇಶ ಕಟ್ಟಿಮನಿ, ರಾಜು ಯಂಕಂಚಿ, ಅನೀಲ ಅಮರಗೊಂಡ, ಬಸಯ್ಯ ಹಿರೇಮಠ, ಇನ್ನೂಸ್ ಜುಮನಾಳ, ರಾಮು ಅವಟಗೇರಿ, ಕುಮಾರ ಯಂಕಂಚಿ, ಕೇದಾರ ಕುಂಟೋಜಿ, ಗುರು ಹಿರೇಮಠ, ಪ್ರಕಾಶ ಬಡಿಗೇರ, ಮಹ್ಮದ ಆಲಮೇಲ ಸೇರಿದಂತೆ ಅನೇಕರಿದ್ದರು.