ಮೈಸೂರು: ಏ.೧೦ ರಂದು ಮೈಸೂರಿನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಕಾವ್ಯಶ್ರೀ ಚಾರಿಟೆಬಲ್ ಟ್ರಸ್ಟ ಸಹಯೋಗದಲ್ಲಿ ಜರುಗಿದ ಕರ್ನಾಟಕ ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ರಾಜ್ಯ ಪ್ರಶಸ್ತಿಗೆ ೧೦ ವಿಶೇಷ ಚೇತನರ ಸಾಧಕರನ್ನು ಪ್ರಶಸ್ತಿ ನೀಡಿ ಗೌರವಿಸಿ ಸನ್ಮಾನಿಸಲಾಯಿತು.
ಆರೂಢ ಭಾರತಿ ಸ್ವಾಮೀಜಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್,ಉಪಾಧ್ಯಕ್ಷ ಟಿ.ತ್ಯಾಗರಾಜು, ಕಾವ್ಯಶ್ರೀ ಚಾರಿಟೆಬಲ್ ಅಧ್ಯಕ್ಷ ಜಿ.ಶಿವಣ್ಣ, ಚೇತನ ಪೌಂಡೇಶನ್ ಅಧ್ಯಕ್ಷ ಚಂದ್ರಶೇಖರ ಮಾಡಲಗೇರಿ, ಭಾಷಾ ಅಲ್ಪಸಂಖ್ಯಾತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಎಲ್.ಐ.ಲಕ್ಕಮ್ಮನವರ, ಸಾಹಿತಿ ಪಂಡಿತ ಅವುಜಿ, ಅಪ್ನಾದೇಶ ಸಂಘಟನೆಯ ರಾಜ್ಯಾಧ್ಯಕ್ಷ ವೈ.ಬಿ.ಕಡಕೋಳ, ಡಾ.ವೀಣಾ.ಲೂಸಿ ಸಾಲ್ಡಾನಾ, ನಟ ಚಿಕ್ಕ ಹೆಜ್ಜಾಜೆ ಮಹದೇವ್ ಮೊದಲಾದವರ ಸಮ್ಮುಖದಲ್ಲಿ ಸಾಧಕರನ್ನು ಪ್ರಶಸ್ತಿ ನೀಡಿ ಗೌರವಿಸಿ ಸನ್ಮಾನಿಸಲಾಯಿತು
ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ವಿವಿಧ ಕ್ಷೇತ್ರಗಳ ಸಾಧಕರೆಂದರೆ ೧. ಪ್ರಕಾಶ್ ಆರ್ ತುಮಕೂರು (ಸಾಹಿತ್ಯ. ಶಿಕ್ಷಣ. ಸಮಾಜ ಸೇವೆ. ಕ್ರೀಡಾ ಕ್ಷೇತದಲ್ಲಿ ಸಾಧನೆ) ತುಮಕೂರು ಜಿಲ್ಲಾ ವಿಕಲಚೇತನರ ಕ್ರೀಡಾ ಅಕಾಡೆಮಿಯ ಅಧ್ಯಕ್ಷಮತ್ತು ಸಂಸ್ಥಾಪಕ
೨. ಮಂಜುಳಾ ಎಲ್ ವಿಜಯನಗರ ಜಿಲ್ಲೆ ಯುವ ಕವಿಯತ್ರಿ (ಸಾಹಿತ್ಯ. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ)
೩..ಮಹಬೂಬಿ ಸೌದಾಗರ
ಹಾವೇರಿ
(ಕ್ರೀಡಾ ಕ್ಷೇತ್ರದಲ್ಲಿ ಸಾಧನೆ)
೪. ಕಮಲಾಕ್ಷ್ಮಿ ಎಸ್
ಹಾಸನ
ಡಿ (ಕ್ರೀಡಾ ಕ್ಷೇತ್ರದಲ್ಲಿ ಸಾಧನೆ)
೫. ಮುಬೀನ ಎಂ ಕೆ
ಕೊಪ್ಪಳ
(ಕ್ರೀಡಾ ಕ್ಷೇತ್ರದಲ್ಲಿ ಸಾಧನೆ)
೬.. ಸಂಗೀತಾ ಅಲಾದಗಿದ
ಹುಬ್ಬಳಿ
( ಫ್ಯಾಷನ್ ಶೋ ಅಥ್ಲೆಟಿಕ್ಸ್ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ)
೭.. ಡಾ. ತಿಪ್ಪೇಸ್ವಾಮಿ ವಿ ಮಡಿವಾಳ ಕೊಪ್ಪಳ ( ವೈದ್ಯಕೀಯ ಸಾಹಿತ್ಯ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ)
೮. ಗಂಗಾರಾಜು ಪಿ
ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕು
(ರಾಷ್ಟ್ರೀಯ ವೀಲ್ ಚೇರ್ ಬಾಸ್ಕೆಟ್ ಬಾಲ್ ಕ್ರೀಡಾ ಪಟು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ)
೯. ಸುಧಾ ಎಂ ಗೌಡ
ಹಾಸನ
(ಸಂಗೀತ ಸಮಾಜ ಸೇವೆ)
೧೦. ಸಂತೋಷ ಟಿ ಪಿ
ತುಮಕೂರು ಜಿಲ್ಲೆ ಶಿರಾ ತಾಲ್ಲೂಕು
( ಕೃಷಿ ಕ್ಷೇತ್ರ ಮತ್ತು ಕ್ರೀಡೆ )ಹೀಗೆ ಅವರ ಸಾಧನೆ ಗಳನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಚಂದ್ರಶೇಖರ ಮಾಡಲಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಜಿ.ಶಿವಣ್ಣ ಸ್ವಾಗತಿಸಿದರು.