- Advertisement -
ವಿಶ್ವ ಪರಿಸರ ದಿನಾಚರಣೆ
ನೀರು ಅಲ್ಪತೆ
ಭೂಮಿ ಹಿಂಗದೆ
ಹಳ್ಳಿಗಳ ಹಳ್ಳಕ್ಕೆ ರಕ್ಕಸರಂತೆ
ಆಕ್ರಮಿಸಿತು ಜಗಕ್ಕೆಲ್ಲ ಈ ಸಿಮೆಂಟ್….!!
ಹಳ್ಳಿಗಳ ಹಳ್ಳದ
ಮರಳುಗಳ್ಳರು
ಪಾತಾಳಕ್ಕಿಟ್ಟು ದೋಚಿದರು
ವರ್ತಿಯೇ ಇಲ್ಲದ ಭೂ ಮಾತೆ ಬಂಜೆಯಾದಳು…!!
- Advertisement -
ಕಾಡು ಇದ್ದರೂ
ಕಾಡುಗಳ್ಳರು ದೋಚಿದರು
ವಿರಳ ಹಸಿರತೆ ಮರುಭೂಮಿಯಾದರೆ
ಕಾಡುಪ್ರಾಣಿಗಳು ಹೊಕ್ಕವು ನಗರ ಪಟ್ಟಣಗಳಿಗೆ…!!
ಬಿಸಿಯ ತಾಪಕ್ಕೆ ವಿಶ್ವವೇ
ಹೊತ್ತಿ ಉರಿದು ತಾಪಮಾನ ಏರಿಕೆಯಿಂದ
ಜಗದ ಜನರ ಮನಸುಗಳ ಬಿಸಿಯು ನೆತ್ತಿಗೇರಿದ
ವಿಕೃತಿಯ ತಾಪಮಾನಕ್ಕೆ ಬುದ್ಧಿ ಭ್ರಮಿಸಿತು….!!
ಪ್ರಕೃತಿ ಪಂಚಭೂತಗಳ
ಕಾಲಗಳ ಲಯವಿಲ್ಲದ
ಕಾಲ ಪ್ರಕೃತಿಯು ದಿಕ್ಕೆಟ್ಟು ಕೆಂಡದ ಮಳೆಯಾಗಿದೆ
ಪ್ರಕೃತಿಯೇ ತಾಳ ತಂತು ತಪ್ಪಿದ ಕಾಲಮಾನವಾಗಿದೆ…!!
- Advertisement -
ಪ್ರಕೃತಿಯ ಪರಿಸರಕ್ಕೆ
ಯಾರಿಗೆ ಯಾರೆಂದರೆ ನನಗೆ ನಾನೆಂದರೆ
ನಮ್ಮೆಲ್ಲರ ಅಹಂ ಅವತರಿಸಿದರೆ ಮುಂದೆ
ಇರುವುದು ನಮಗೆಲ್ಲಾ ಕಾದಿಟ್ಟ ಘೋರ ಶಿಕ್ಷೆ…!!
— ಸಂಗಮ್ ಟಿ.ಜಿ.
ಗಣಿತ ಶಿಕ್ಷಕರು, ಕೊಟ್ಟೂರು.
ಮೊಬೈಲ್ : 7813074106