- Advertisement -
ಕಟ್ಟ ಬನ್ನಿ
ಗೆಳೆಯರೇ
ನಾವು ದೊಡ್ಡ ದೇಶದ
ದಡ್ಡ ಜನರು
ಮೂಢರು ಮೂರ್ಖರು
ಭಾವುಕರು ಮುಗ್ಧರು
ದೊಡ್ಡವರನ್ನು ತಲೆಯ ಮೇಲೆ
ಹೊತ್ತು ಕುಣಿಯುವವರು
ಬಾಬಾಸಾಹೇಬ ಅಂಬೇಡ್ಕರರನ್ನು
ದಲಿತರಿಗೆ ಮೀಸಲಿಟ್ಟೆವು
ಆಗಲಿಲ್ಲ ರಾಷ್ಟ್ರ ನಾಯಕ
ಕ್ರಾಂತಿಕಾರಿ ಬಸವನನ್ನು
ಕಾವಿ ಮಠಗಳು ಕಟ್ಟಿಬಿಟ್ಟವು
ಆಗಲಿಲ್ಲ ಜಗದ ಬೆಳಕು
- Advertisement -
ಅವನ ಹೆಸರಲಿ ಬದುಕುತಿಹೆವು
ಗಾಂಧಿಯನ್ನು ಕೊಂದು ಬಿಟ್ಟೆವು
ಒಂದು ಪಕ್ಷ ಕಟ್ಟಿಬಿಟ್ಟೆವು
ಪಠ್ಯದಲ್ಲಿ ಚರಕ ನೂತು
ಗ್ರಾಮ ರಾಜ್ಯ ಕಂಡೆವು
ಬುದ್ಧನನ್ನು ಓಡಿಸಿದೆವು
ದೇಶ ಬಿಟ್ಟು ಗಡಿಯಾಚೆ
ವಿಶ್ವ ತುಂಬಾ ಅವನ ನೆನಹು
ಇಲ್ಲಿ ಮಾತ್ರ ಕತ್ತಲು.
ಜಾತಿ ಧರ್ಮ ಪಂಥ ಕದನ
ನಿಲ್ಲಲಾರದ ರೋದನ
ಎಲ್ಲಾ ಬಿಟ್ಟು ಕಟ್ಟ ಬನ್ನಿ
ನಮ್ಮ ಭಾರತ ಸಾಧನ
__________________
- Advertisement -
ಡಾ.ಶಶಿಕಾಂತ ಪಟ್ಟಣ, ರಾಮದುರ್ಗ