- Advertisement -
ಕಲಿಕಾ ಹಬ್ಬ
ಕಲಿಕಾ ಹಬ್ಬವಿದು
ಸಾಮರ್ಥ್ಯವ ಸಾಬೀತು ಪಡಿಸಲು
ಸಂತಸದಾಯಕ ರೂಪಕವು
ಭಾಷಾ ಕೌಶಲ್ಯ ಮೂಡಿಸುತ್ತಾ
ಕಥೆ ಕಟ್ಟುತ
ನೀತಿ ಭಾವ ಲಹರಿಯು.
- Advertisement -
ಅಕ್ಷರ ಬರವಣಿಗೆ
ಸಾಕ್ಷರತೆಯ ಬೆಳವಣಿಗೆ
ಶಿಕ್ಷಣದ ಶಕ್ತಿಯ ಬೆಸುಗೆ
ಮೋಜಿನ ವಿಧಾನದಿ
ಕೂಡುತ ಕಳೆಯುತ
ಗುಣಿಸುತ ಭಾಗಿಸುತ.
ಚಿತ್ರದ ಮೂಲಕ
ವಸ್ತುಗಳ ಬಳಕೆಯಲಿ
ನೆನಪಿನ ಶಕ್ತಿಯ ಅಳೆಯುತ.
- Advertisement -
ಚಟುವಟಿಕೆ ಆಧಾರಿತ
ಕಲಿಕಾಕೌಶಲ್ಯ ಪ್ರಸಾರ ಮಾಡಲು
ವಿಚಾರ ಮಂಟಪ ಮಾಡುತ.
ಸ್ಫೂರ್ತಿಯ ಚಿಲುಮೆ
ಸಹಸಂಬಂಧ ಮೂಡಿಸುತ
ಪಾಲಕರೊಂದಿಗೆ ಒಡನಾಡುತ
ಇದುವೆ ಕಲಿಕಾ ಹಬ್ಬ
ಸಡಗರದ ಅರಿವಿನ ಹಬ್ಬ
ಸರಿಸುತ ಅಂಧಕಾರದ ಮಬ್ಬ.
ಸೇರೋಣ ಎಲ್ಲರೂ
ಒಂದಾಗಿ ಚಂದಾಗಿ ಅಕ್ಷರ ಉತ್ಸವದಿ
ಕಲಿಕೆ ಪ್ರಗತಿ ಪಥದಲಿ ಸಾಗಿಸುತ.
ರೇಷ್ಮಾ ಕಂದಕೂರ