- Advertisement -
ಹಿಮದ ಅಡಿಯಲ್ಲಿ ಸಿಕ್ಕು ೭ ದಿನ ಬದುಕಿ ಹೊರಗೆ ಬಂದು ಪ್ರಾಣ ಬಿಟ್ಟ ಹಣಮಂತ ಕೊಪ್ಪದ ಇವರ ಸ್ಮರಣೆಗೆ
ವಿಧವೆಯಾದಳು ವೀರ ಮಡದಿ
————————————-
ಅಂದು ಸೂರ್ಯ ಮುಳುಗಿರಲಿಲ್ಲ.
ದನಕರು ಮೇಕೆ ಹಟ್ಟಿಗೆ ಬಂದವು.
ರೈತರ ಜಗುಲಿಯ ಮೇಲೆ ಹರಟೆ
ಸಂಜೆ ಟಿವಿ ಬಾನುಲಿಯ ಸುದ್ಧಿ.
ಹಿಮದಡಿಗೆ ಹೂತು ಹೋದ ಯೋಧರು.
ಹುಡುಕಲಾಗಲಿಲ್ಲ ಅವನ
ವಾರ ಕಳೆಯಿತು ದಿನಗಳುರುಳಿ
ದುಗುಡು ನೋವು ಮಡುವಾಯಿತು.
ಉಸಿರುಗಟ್ಟಿ ದರೂ ಬದುಕಿಬಿಟ್ಟ
ಹೊರಗೆ ಬಂದು ನಸು ನಕ್ಕು
ನಾ ಸಾಯುವೆ ದೇಶಕೆಂದ
ಅವ್ವ ಅಣ್ಣ ಹೆಂಡತಿಯ ಸಂತಸ
ದೇಶವೆಲ್ಲ ಪ್ರಾರ್ಥಿಸಿತು
ಕಲ್ಲು ದೇವರು ಕರುಣಿಯಲ್ಲ
ಜೀವ ಹೀರಿತು ಹನುಮಂತನದು
ಗಂಡ ಉಳಿದರೆ ಮತ್ತೆ ಯುದ್ಧಕೆ
ದಿಟ್ಟ ಮಡದಿಯ ಮಾತು.
ಉಳಿಯಲಿಲ್ಲ ವೀರ ಸೈನಿಕ
ಮಣ್ಣಿನಲ್ಲಿ ಹೂತೆವು
ಪುಟ್ಟ ಮಗುವಿಗೆ ಅರಿವು ಬಾರದು
ಅಪ್ಪ ಸತ್ತ ಶೋಕವು
ಬಳೆಗಳ ಒಡೆದರು ಕಿತ್ತು ಕುಂಕುಮ
ವಿಧವೆಯಾದಳು ವೀರ ಮಡದಿ
ಏಕೆ ಬೇಕು ಸಮರ ಯುದ್ಧ
ವಿಶ್ವ ಶಾಂತಿಗೆ ಸಿದ್ಧವು
———————————
ಡಾ .ಶಶಿಕಾಂತ.ಪಟ್ಟಣ.ಪೂನಾ