ಸಂಭ್ರಮ
_________________
ನೀಲಾಕಾಶವ ಮುತ್ತಿಕುವ
ಭರದಲ್ಲಿ ಹಾರುವ ಗಾಳಿಪಟ.
ಎಷ್ಟು ನಯನಮನೋಹರ..
ಬಾಲ್ಯದ ಸವಿ ನೆನಪುಗಳ
ಸಂಭ್ರಮ ಹಸಿರಾಗಿಸಿ..
ಹಗಲಲ್ಲಿ ಬಾನನ್ನು ಚುಕ್ಕಿಯಂತೆ
ಎಲ್ಲ ಬಣ್ಣಗಳಿಂದ ಅಲಂಕರಿಸಿ.
ನೇಸರನ,ತವರೂರಿನವನಾ?..
ಆತನಿಗೂ ನಿನಗೂ ನೆಂಟಸ್ತಿಕೆ ಏನೋ..
ಅದೆಷ್ಟು ರಭಸದೀ ಬಾನೆತ್ತರಕ್ಕೆ
ಜಿಗಿದಂತೆ ನೀನಾಗುವೆ ವಿನಯ..
ಇಂಥ ಸಾರವನರಿಯುವಲ್ಲೀ
ಮನುಜನೇಕೆ ಸೋತ ಕಾಣೆ
ಕಾಮನಬಿಲ್ಲಿನೊಂದಿಗೆ,ಅದೃಶ್ಯ
ಚುಕ್ಕಿಗಳೊಂದಿಗೆ ನಿನ್ನ ಪಯಣ
ಚಿಣ್ಣರ ಮುಗುಳು ನಗೆ..
ನೀಲ ನಭದಿ ನಿನ್ನ ಸೊಗಸಿನ ತಾಣ
ಗಾಳಿಪಟದ ಹಾರಾಟದಂತೆ
ಈ ಬದುಕಿನ ಆಟ.
ಆಡಿಸುವಾತನ ಕೈ ಸೋಲುವವರೆಗೂ
ನಮ್ಮ ಹೋರಾಟ..
ಬಾನಲ್ಲಿ ರೆಕ್ಕೆ ಬಿಚ್ಚಿ ಹಾರುವಾಗ,
ಕನಸ್ಸು ನನಸಾದಂತೆ,
ಅದೇನೋ ಸಂಭ್ರಮ..ಸೊಗಸು
ಅದುವೇ ನಮ್ಮ ಬದುಕಿನ ಸಾರ್ಥಕತೆ..
ಬಸವ, ನಮ್ಮೆಲ್ಲರ ಸಾಧನೆಯನ್ನು
ರಂಗಿನ ಗಾಳಿಪಟವನ್ನಾಗಿಸಲಿ.
ಮನುಜ ತಾ ಸಾಧನೆಯ
ಶಿಖರವೇರಿದರೂ
ಸೃಷ್ಟಿ ಕರ್ತನ ಮುಂದೆ
ನಾವೆಲ್ಲ ಅದೆಷ್ಟು ಸಣ್ಣವರು.
ಇದೇ ಅಲ್ವೇ ನೀ ಹಾರುತ
ಹೇಳಲು ಯತ್ನಿಸುವ ನೀತಿ ಪಾಠ..
ಇದನರಿತವರ ಬಾಳೆ ಅಂದದ
ಸೊಬಗಿನ ಹೂದೋಟ.
_________________________
ಡಾ ಶಾರದಾಮಣಿ ಹುನಶಾಳ