ಲಿಂಗಾಯತ ಸಾಫ್ಟ್‌ವೇರ್ ಕರಪ್ಟಾಗಿದೆ…
ಕ್ಷಮಿಸಿ
ವಚನ ಶಾಸ್ತ್ರ ಲಿಂಗಾಯತ
ಸಾಫ್ಟ್‌ವೇರುಗಳೆಲ್ಲಾ ಕರಪ್ಟಾಗಿವೆ
ಮೊನ್ನೆಮೊನ್ನೆ ಹಾಕಿಸಿದ
ಶರಣರ ಮದರಬೋಡಿಗೆ
ಮೆಮೊರಿ ಆಪ್ಷನ್ನೇ
ತೆಗೆದುಹಾಕಲಾಗಿದೆಯಂತೆ
ಈಗ ಅನುಭವ
ಸಾಫ್ಟ್‌ವೇರೂ
ಬರುವುದೇ ಹೀಗಂತೆ!
ಬಸವ ಧರ್ಮ
ಹೊಸ ಲ್ಯಾಪ್‌ಟಾಪಿಗೆ
ಬ್ಯಾಟರಿ ಡ್ರೈವೇ ಇಲ್ಲ
ಬಸವ ಭಕ್ತರ
ಮೇನ್‌ಸ್ವಿಚ್ಚಿನೊಂದಿಗೆ
ಕನೆಕ್ಷನ್ನೂ ಇಲ್ಲ
ಅಲ್ಲದೆ
ಯಾವ ನೆನಪೂ ಇಲ್ಲ
ಮೆಮೋರಿ ಲಾಸಾಗಿದೆ,
ಎಲ್ಲವೂ ಮರೆತಿದೆ…
ಅರಿವಳಿಕೆ ತಿನ್ನುತ್ತ
ಆಪರೇಷನ್ ಟೇಬಲ್ಲಿನ ಮೇಲೆ
ಒಂಬತ್ತು ಶತಮಾನ
ಕಳೆದದ್ದೂ ನೆನಪೇ ಇಲ್ಲ
ಇದೀಗ
ವಚನ ದರ್ಶನ ವೈರಸ್
ಒಳಗೆ ನುಸುಳಿದೆ.
ಸಿಸ್ಟಮ್ ಕೆಟ್ಟು ಹೋಗಿದೆ
ಮಠ ಸ್ವಾಮಿಗಳ
ಫೈಲುಗಳಲ್ಲೂ,
ಅಗ್ರಹಾರದ ಮುದ್ರೆ ಬಿದ್ದಿದೆ
ಫೋಲ್ಡರುಗಳಲ್ಲೂ
ಶರಣರು ವಿಂಡೋ
ಬಂದಾಗಿದೆ..
ಇನ್ನು
ವೈರಸ್ ಗಾರ್ಡ್‌ಗಳಾಕಿ
ಉಪಯೋಗವಿಲ್ಲ..
ಮೆಮೋರಿ ಮರೆತ
ನಿವೃತ್ತಿ ಅಧಿಕಾರಿಗಳ
ಮೊದಲು ತೆಗೆದು
ಹಾಕಬೇಕು..
ಲಿಂಗಕ್ಕೆ ವೈರಸ್ ಹತ್ತದ
ಸಾಫ್ಟ್‌ವೇರನ್ನು ಹಾಕಬೇಕು
ಇಲ್ಲವೆಂದರೆ
ನಮ್ಮ ಗುರು ಜಂಗಮ ಅಳವಡಿಸಿ
ಲ್ಯಾಪು
ಮತ್ತದರ ಟಾಪು
ಎರಡನ್ನೂ ಬದಲಿಸಬೇಕು.
_________________________
ಡಾ ಶಶಿಕಾಂತ ಪಟ್ಟಣ ರಾಮದುರ್ಗ