ಸಾಧಿಸಿದ್ದೇನು ?
ಮರೆತು ಬಿಟ್ಟೇವಾ ಮಾನವೀಯತೆ
ಎತ್ತ ನೋಡಿದರೂ ರಕ್ತ ಕಣಗಳು
ಬಿತ್ತಲಾರೆವಾ ಕರುಣೆ ವಾತ್ಸಲ್ಯ
ಮನುಜನೆಂಬುದಕೆ ಧಿಕ್ಕಾರ
ದ್ವೇಷದ ಕಿಚ್ಚು ಹಚ್ಚಿ
ಮೋಹದ ಮದ ಏರಿ
ದಾಹದ ನರ್ತನಕೆ
ಕಿತ್ತು ತಿಂದಿರ
ಪ್ರೇಮದ ಶಿಖರಕೆ
ಸೂತಕದ ಛಾಯೆ ಮೂಡಿಸಿ
ಧರ್ಮದ ಸೋಗಲಿ
ಆತ್ಮದ ಮರ್ಮ ತಿಳಿಯಲಿಲ್ಲವೇ
ಎಲ್ಲಿಹುದು ಹಿಂಸೆಯ ಧರ್ಮ
ಗಾಂಪರರೊಡೆಯನ ನೀತಿಯಂತೆ
ಭೀತಿ ಹುಟ್ಟಿಸುವಿರೇಕೆ
ನೀತಿ ನಿಯಮ ಗಾಳಿಗೆ ತೂರಿ
ಅದೆಷ್ಟೊ ಕನಸುಗಳು ಕಮರಿ ಹೋಗಿವೆ
ಮನಸುಗಳ ಛಿದ್ರ ಮಾಡಿವೆ
ಮುನಿಸುಗಳ ಬಿರುಕು ಬಿಟ್ಟಿದೆ
ಸಾಧಿಸಿದ್ದಾದರೂ ಏನು ?
ರೇಷ್ಮಾ ಕಂದಕೂರ, ಗಂಗಾವತಿ