ಕ್ರಾಂತಿಯೋಗಿ ಬಸವಣ್ಣ
ಕೂಡಲ ಸಂಗಮದೇವನ ನಾಮವ
ಅಂಕಿತವಾಗಿ ಬಳಸುತಲಿ
ಮೂಡಿದ ಮನಸಿನ ಜಾಡ್ಯವ ಕಳೆದನು
ಭಕ್ತಿ ಭಂಡಾರಿ ಬಸವಣ್ಣ
ಕಾಯಕಯೋಗಿಯು,ನಾಯಕನೀತ
ವಚನದಿ ತತ್ವವ ಬಿತ್ತುತಲಿ
ಕಾವ್ಯದ ಹರಿವಿನ ಮೂಲಕ ಕಲ್ಯಾಣ
ಕ್ರಾಂತಿಯ ಸತ್ವವ ಸಾರುತಲಿ
ದೇವನು ಒಬ್ಬ ನಾಮಗಳನೇಕ
ಎಂದನು ಐಕ್ಯತೆ ಬೋಧಿಸುತ
ಜೀವಿಗಳೆಲ್ಲರ ಮೇಲಿರೆ ದಯವು
ಮೂಲವೆ ಧರ್ಮಕೆ ದಯೆ ಎನುತ
ಲಿಂಗದ ಮಧ್ಯೆ ಜಗತ್ ಸರ್ವಂ
ಕಾಯಕವೇ ಕೈಲಾಸವು
ಹಂಗಿನ ಅರಮನೆ ಏತಕೆ ಎನುತ
ಲಿಂಗದ ದೀಕ್ಷೆಗೆ ಮುಂದಾದ
ಅರಿವೆಂಬುದೆ ಗುರು,ಮಾತೇ ಮಾಣಿಕ್ಯ
ನುಡಿದರೆ ಲಿಂಗವು ಅಹುದೆನಲಿ
ಗುರು ಲಿಂಗ ಜಂಗಮರ ಸಂಗ ಮೇಲೆಂದ
ಬಾಗೇವಾಡಿಯ ಸಿರಿ ಬಸವ.
✍️ ಶ್ರೀಮತಿ ಕಮಲಾಕ್ಷಿ ಕೌಜಲಗಿ
ಬೆಂಗಳೂರು.