Homeಕವನಕವನ : ನಿನ್ನೊಲವೇ ಒಂದು ರೋಮಾಂಚನ !

ಕವನ : ನಿನ್ನೊಲವೇ ಒಂದು ರೋಮಾಂಚನ !

       🌹ನಿನ್ನೊಲವೇ ಒಂದು ರೋಮಾಂಚನ🌹

ನಿನ್ನ ಮಿಂಚುವ ಕಣ್ಣುಗಳಲಿ
ನೀನಾಡುವ ಮಾತುಗಳಲಿ
ನೀ ನೋಡುವ ನೋಟದಲಿ
ನೀನೆರೆಯುವ ಪ್ರೀತಿಯಲಿ

ರೋಮಾಂಚನವೇ ರೋಮಾಂಚನ !

ನೋಡುತನಿನ್ನ ಮುಗ್ಧಮೊಗದಲಿ
ನಗುವ ಆ ತುಂಟ ಮುಗುಳ್ನಗೆಯಲಿ
ನಿನ್ನ ಅಗಲಿಕೆಯ ವಿರಹ ವೇದನೆಯಲಿ
ನಿನ್ನ ನೆನಪಿನ ಆ ದೋಣಿ ಯಲ್ಲಿ

ರೋಮಾಂಚನವೇ ರೋಮಾಂಚನ !

ನಿತ್ಯ ಸೂಸುವ ತಂಗಾಳಿಯಲಿ
ಭಾವಾನುಭವದ ಆಗರದಲಿ
ನಿನಗಾಗಿ ಸುರಿಸುವ ಕಂಬನಿಧಾರೆಯಲಿ
ನಿನ್ನ ಸ್ಪರ್ಶದ ಆ ಸಗ್ಗದಲಿ

ರೋಮಾಂಚನವೇ ರೋಮಾಂಚನ !

ನೀ ಬಂದ ಆ ಘಳಿಗೆಯಲಿ
ಕಟ್ಟಿದಾ ಕನಸಿನರಮನೆಯಲಿ
ನಿನ್ನಪ್ಪುಗೆಯ ಬಿಸಿ ಉಸಿರಿನಲಿ
ಓ, ನಲ್ಲನೇ ಏನೆಂದು ಉಸಿರಲಿ

ನಿನ್ನೊಲವೇ ಒಂದು ರೋಮಾಂಚನ !!

✍️ಶ್ರೀ ಮತಿ ಲೀಲಾ ಅ. ರಜಪೂತ
ಹುಕ್ಕೇರಿ

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group