ಮೊದಲ ಹೆಜ್ಜೆ
ಕುಳಿತು ನೋಡಿದರೆ
ಕೈಗೆಟಕದ್ದೆಂದರೆ,
ಕಡ್ಡಿ ಗುಡ್ಡವಾಗಿ ಕಾಣುವುದಲ್ಲ.
ಮುಂದಡಿಯಿಟ್ಟರೆ ಮುನ್ನುಗ್ಗಿದರೆ,
ದೊಡ್ಡ ಗುಡ್ಡ ಕಾಲ ಕೆಳಗೆ ನಿಲ್ಲುವುದಲ್ಲ!
ಕೈಗೆಟಕದ್ದೆಂದರೆ,
ಕಡ್ಡಿ ಗುಡ್ಡವಾಗಿ ಕಾಣುವುದಲ್ಲ.
ಮುಂದಡಿಯಿಟ್ಟರೆ ಮುನ್ನುಗ್ಗಿದರೆ,
ದೊಡ್ಡ ಗುಡ್ಡ ಕಾಲ ಕೆಳಗೆ ನಿಲ್ಲುವುದಲ್ಲ!
ಸುಮ್ಮನೆ ಯೋಚಿಸಿದರೆ
ಚಿಂತೆಯಲ್ಲಿ ಮುಳುಗಿದರೆ,
ಸುಲಭವೂ ಸುಲಭವಲ್ಲ
ಅಂತನಿಸುವುದಲ್ಲ.
ಎದ್ದು ನಡೆಯುತ್ತಿದ್ದರೆ
ಕಷ್ಟಗಳಿಗೆ ಕರಗದ ಬೆಟ್ಟದಂತಿದ್ದರೆ,
ನಂಬದ ಪವಾಡ ಜರುಗುವುದಲ್ಲ!
ಮೇಲಕ್ಕೇರಬೇಕೆಂದರೆ
ತುತ್ತತುದಿ ತಲುಪಬೇಕೆಂದರೆ,
ಮೆಟ್ಟಿಲುಗಳು ಲೆಕ್ಕಕ್ಕೆ ಬರುವುದಿಲ್ಲ.
ಮೈಮರೆತರೆ ಕೈ ಚೆಲ್ಲಿ ಕೂತರೆ,
ಕೈಯಲ್ಲಿರುವುದು ಆಗುವುದಿಲ್ಲ.
ಗುರಿಯಿರುವೆಡೆ ಅಡೆತಡೆಯಿದ್ದರೆ,
ಕೈಗಳು ಕೈಗಳಿಗೆ ಜೋಡಿ ಆಗುವವಲ್ಲ.
ಸಾಗುವ ದಾರಿಯಲ್ಲಿ ಕತ್ತಲಿದ್ದರೆ
ಗುರುವಿನ ನೆನೆದರೆ,
ಹೊಸ ಬೆಳಕೊಂದು
ಹೊಳೆಯುವುದಲ್ಲ!
ಸಾವಿರ ಮೈಲಿಗೂ ಮೊದಲ ಹೆಜ್ಜೆಯೇ ಮೊದಲು,
ಯಾವುದಕ್ಕೂ ಮೊದಲುಹೆಜ್ಜೆ ಎತ್ತಿಡಬೇಕಲ್ಲ….!
================
ಜಯಶ್ರೀ. ಜೆ.ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ 9449234142
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ 9449234142