ಕವಿ ಬಯಕೆ
ಒಬ್ಬ ಸಾಹಿತ್ಯ ಪ್ರಿಯ
ಕವಿಯಾಗಲೆಂದು
ಏನೇನೋ ಬರೆದ
ಕವಿಯಾದ ಮೇಲೆ
ಬರೀಲೇಬೇಕಂತ
ಇನ್ನಷ್ಟು ಬರೆದ
ಕಿವಿಯಿಂದ
ಕೇಳುವುದ ಕೇಳಿದ
ಕೇಳಬಾರದ್ದು ಕೇಳಿದ
ಕಣ್ಣಿಂದ
ಒಳಿತು ನೋಡಿದ
ಕೆಡುಕನ್ನೂ ನೋಡಿದ
ಸರಿ ಅನಿಸಿದ್ದೆಲ್ಲ
ಹಾಳೆಗೆ ಸುರಿದ
ತಪ್ಪು ಅನಿಸಿದ್ದೆಲ್ಲ
ಹೊರಗೆಸೆದ
ಕನಸುಗಳಿಂದ
ಕಾವ್ಯ ಹೊಸೆದ
ಸನ್ನಿವೇಶಗಳಿಂದ ಕಥೆ ಕಟ್ಟಿದ
ಪ್ರೀತಿಗಳಿಗೆ ಬಣ್ಣ ಬಳಿದ
ದ್ವೇಷಗಳಿಗೆ ಸುಣ್ಣ ಸವರಿದ
ಸ್ನೇಹಕ್ಕೆ ನಮಸ್ಕರಿಸಿದ
ಅಸೂಯೆಗೆ ಅವಮಾನಿಸಿದ
ಅಕ್ಷರಗಳಿಗೆ ಅಂದ ನೀಡಿದ
ಸಾಲುಗಳ ಸೃಷ್ಟಿ ಮಾಡಿದ
ಬರೆದ ಬರೆದ
ಹಾಳೆ ತುಂಬಿಸಿದ
ಅರ್ಥ ಬಿಂಬಿಸಿದ
ಸರಿಯಾಗಿ ಜೋಡಿಸಿದ
ಪುಸ್ತಕಗಳ ಮಾಡಿದ
ಕವಿಯಂತೂ ಆದ
ಓದುವ ಮನಸುಗಳಿಗಾಗಿ
ಕಾಯ್ದ ಕಾಯ್ದ
ಕಾಯುತ್ತಲೇ ಕಂಗಾಲಾದ
ಎಂ.ಸಂಗಪ್ಪ
ಲಿಂಗಸುಗೂರು