ವರಮಹಾಲಕ್ಷ್ಮಿ
ಶುಭ ಶುಕ್ರವಾರದ ಪುಣ್ಯ ದಿನವು
ವರಮಹಾಲಕ್ಷ್ಮಿ ಹಬ್ಬದಿ ಮನವು
ಸ್ಮರಿಸುತ್ತ ಸುರಿಸಿ ಮಲ್ಲಿಗೆ ಹೂವು.
ಬೇಡುತಿದೆ ಭಕ್ತಿಯಲಿ ಈ ಜಗವು.!
ಶ್ರೀಹರಿಯ ಹೃದಯದ ಅರಗಿಣಿ
ತಾವರೆ ಪೀಠದ ಒಲವಿನ ರಮಣಿ
ದೀನರ ಬಾಳಿನ ಪ್ರೀತಿಯ ಕಣ್ಮಣಿ
ಸಂಕಟವ ಕಳೆವ ಸ್ವರ್ಗದ ರಾಗಿಣಿ.!
ಕುಂಕುಮದ ಬಿಂದು ಹಣೆಯೊಳು
ಅರಿಶಿಣ ಚಂದನವು ಮೊಗದೊಳು
ಮೂಗುತಿಯ ನತ್ತಿನ ಮಿಂಚೊಳು
ಹೊಳೆವೆ ಮಹಾಲಕ್ಷ್ಮಿ ನಗೆಯೊಳು.!
ಚತುರ್ಭುಜೆಯ ವರಧಾತೆ ಚಿನ್ಮಯಿ
ದುಡಿಮೆಗೆ ಒಲಿವ ಕರುಣಾಮಯಿ
ಸುಖಶಾಂತಿ ನೀಡುವ ಮಹಾ ತಾಯಿ
ಜಗವನ್ನೆ ಕಾಯ್ವ ಸೌಖ್ಯ ಪ್ರದಾಯಿ.!
ಭಯ ಅಳಿಸಿ, ದಯದಿ ಕಳೆವೆ ಭೀತಿ
ಹಸಿರು ಬಳೆಯ ಮುತ್ತೈದೆ ಸಂಸ್ಕೃತಿ
ಭಕ್ತಗಣಕೆ ನಿತ್ಯ ನೀಡೊ ಮಧುಮತಿ
ಹಸನ್ಮುಖಿ ಶ್ರೀ ಬಾಲಾಜಿಯ ಒಡತಿ !
(ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ
ಶುಭಾಶಯಗಳು)
✍️ ಎಚ್.ಡಿ.ಬಸವರಾಜ್.ಗಂಗಾವತಿ
9900473814