ಕಲ್ಲು ದೇವರು
ಕಲ್ಲು ದೇವರು
ದೇವರಲ್ಲ
ಎಂದ ನಮ್ಮ ಬಸವನು
ಕಲ್ಲು ಮೂರ್ತಿ
ಮಾಡಿ ಬಿಟ್ಟೆವು
ನಾವು ನೀವು ಮಠಗಳು
ಮಣ್ಣು ಮೂರ್ತಿ
ದೇವರಲ್ಲ
ಎಂದ ನಮ್ಮ ಶರಣನು
ಮಣ್ಣು ಮಾಡಿ ಬಿಟ್ಟೆವು
ನಮ್ಮ ಭಕ್ತರು
ಲಿಂಗ ಜಂಗಮ ತತ್ವವು
ಕಂಚು ಲೋಹ
ದೇವರಲ್ಲ
ಎಂದ ನಮ್ಮ ಹಿರಿಯರು
ಕಂಚು ಮೂರ್ತಿಗೆ
ಕೋಟಿ ಸುರಿದರು
ನಮ್ಮ ಮೂರ್ಖ ಮನುಜರು
ನಮ್ಮ ಅರಿವೆ ಗುರು
ಆಚಾರವು ಲಿಂಗ
ಹಂಚಿಕೊಳ್ಳುವ ಅನುಭಾವ
ಜಂಗಮವೆಂದರು ಪ್ರಮಥರು
ಎಲ್ಲಾ ಮರೆತು ಕಾವಿ ಹಿಂದೆ
ಕುಣಿವ ನಾವು ಮೂಢರು
__________________________
ಡಾ ಶಶಿಕಾಂತ ಪಟ್ಟಣ, ರಾಮದುರ್ಗ