ಸ್ವಾತಂತ್ರ್ಯದ ಕಲಿಗಳು
ಸ್ವಾರ್ಥತೆಯ ಮರೆತು
ಸ್ವಾತಂತ್ರ್ಯಕ್ಕಾಗಿ ಸತ್ಯಾಗ್ರಹ ಮಾಡಿ
ಜೀವದ ಹಂಗು ತೊರೆದು ಹೋರಾಡಿ
ಸ್ವಾತಂತ್ರ್ಯ ಗಳಿಸಿ ಕೊಟ್ಟವರು
ಅವರೇ ನಮ್ಮ ಭಾರತದ ಕಲಿಗಳು
ಸ್ವಚ್ಚಂದದ ಸ್ವಂತಿಕೆಯ ತೊರೆದು
ಲಫಂಗರ ಲಾಠಿ ಏಟು ತಿಂದು
ಲೋಕಕ್ಕೆಲ್ಲ ವೀರಾಧಿ ವೀರರಾಗಿ
ಸ್ವಾತಂತ್ರ್ಯ ಗಳಿಸಿ ಕೊಟ್ಟವರು
ಅವರೇ ನಮ್ಮ ಭಾರತದ ಕಲಿಗಳು
ಬೂಟಾಟಿಕೆಯ ಮಾತು ಬಿಟ್ಟು
ಬ್ರಿಟಿಷರ ಬೂಟಿನಡಿ ನಲುಗಿ
ಒದೆ ತಿಂದು ಬಾಗುತ ಬೀಗುತ
ಭವ್ಯ ಭಾರತ ಕಟ್ಟಿದವರು
ಅವರೇ ನಮ್ಮ ಭಾರತದ ಕಲಿಗಳು
ಹತ್ಯಾಕಾಂಡಕೆ ಹೆದರದೆ ಬೆದರದೆ
ಸ್ವಾಭಿಮಾನದಿ ಮನೆ ಮಠ ಬಿಟ್ಟು
ಹಠದಿಂದ ದಿಟವಾಗಿ ಧೈರ್ಯದಿ
ಸ್ವಾತಂತ್ರ್ಯಗಳಿಸಿ ಕೊಟ್ಟವರು
ಅವರೇ ನಮ್ಮ ಭಾರತದ ಕಲಿಗಳು
ಚಳಿ -ಮಳೆ ಬಿರುಗಾಳಿ ಎನ್ನದೆ
ಚಳವಳಿಯ ಹಾದಿ ಹಿಡಿದು ಕೇಕೆ ಹಾಕಿ
ಕೆಂಪು ಮೋತಿಯವರಿಗೆ ಬೆದರದೆ
ಜಬರದಸ್ತ್ ಜೈ ಕಾರ ಹಾಕಿ
ಸ್ವಾತಂತ್ರ್ಯ ಗಳಿಸಿ ಕೊಟ್ಟವರು
ಅವರೇ ನಮ್ಮ ಭಾರತದ ಕಲಿಗಳು
ಬ್ರಿಟಿಷರ ತುಪಾಕಿಯ ತುದಿಗೆ
ಎದೆಗುಂದದೇ ಎದೆಯೊಡ್ಡಿ
ಭಾರತ ಮಾತೆಗೆ ನೆತ್ತರುಣಿಸಿ
ನವ ಭಾರತವನ್ನು ಕಟ್ಟಿದವರು
ಅವರೇ ನಮ್ಮ ಭಾರತದ ಕಲಿಗಳು
ಸ್ವಾತಂತ್ರ್ಯ ಸಿಕ್ಕಿತು ದಕ್ಕಿತೆಂದು
ಸೋಗಿನಲಿ ಬೀಗುವುದು ಬೇಡ
ಇನ್ನು ನಮ್ಮ ಮುಂದೆ ಬೆಟ್ಟದಷ್ಟು
ಸಾವಿರ ಸಾವಿರ ಸವಾಲುಗಳಿವೆ
ಒಂದಾಗಿ, ಚೆಂದಾಗಿ ಸವಾಲುಗಳನು
ಸ್ವೀಕರಿಸಿ ಬಗೆಹರಿಸಿಕೊಳ್ಳೋಣ
ಸ್ವೀಕರಿಸಿ ಬಗೆಹರಿಸಿಕೊಳ್ಳೋಣ
ಅಶೋಕ ಅರ್ಕಸಾಲಿ ನಿವೃತ್ತ ಶಿಕ್ಷಕರು
ತಾ:– ಹೂವಿನ ಹಡಗಲಿ
ಜಿ:– ಬಳ್ಳಾರಿ
೯೯೪೫೪೯೮೯೧೯