ಕೃಷ್ಣ
ಕೃಷ್ಣನ ಕೊಳಲಿನ
ಕರೆ
ಕೇಳಲು ಸುಖದ
ಹೊನಲಿನ ಸುಧೆ
ಕೃಷ್ಣನ ಕೊಳಲಿನ
ಕರೆ
ಸವಿಯಲು ಅಮೃತಾನಂದದ
ಉನ್ಮಾದದ ಸೆಲೆ
ಕೃಷ್ಣನ ಕೊಳಲಿನ ಕರೆ
ಕೇಳಲು
ದುಃಖವ ಮರೆ
ಕೃಷ್ಣನ ಕೊಳಲಿನ ಕರೆ
ಕೇಳಲು
ಕಷ್ಟಗಳ ತೊರೆ
ಕೃಷ್ಣನ ಕೊಳಲಿನ ಕರೆ
ಬೃಂದಾವನಕೆ ಆಮಂತ್ರಣದ
ಕರೆ
ಕೃಷ್ಣನ ಕೊಳಲಿನ ಕರೆಗೆ
ಓಗೊಟ್ಟು ನಿನ್ನಲ್ಲಿಯೇ
ಮೊರೆ
ಡಾ ಜಯಾನಂದ ಧನವಂತ, ಬೆಳಗಾವಿ