ಬಸವ ಸಂಸ್ಕೃತಿ ಅಭಿಯಾನ
ಬಸವ ಸಂಸ್ಕೃತಿ
ಅಭಿಯಾನ
ಎಂದರೆ ಬರಿ ಕಾವಿಗಳ
ದಂಡ ಯಾತ್ರೆಯಲ್ಲ
ಶಾಸಕ ಮಂತ್ರಿಗಳ
ಮೆರವಣಿಗೆಯಲ್ಲ
ಮಲಗಿದ್ದ ನಿದ್ರಾಸುರರಿಗೆ
ಉದ್ದೀಪನ ಔಷಧಿ ನೀಡಿ
ಸತ್ಯ ಮರೆ ಮಾಚುವುದಲ್ಲ
ಮಠಗಳಲ್ಲಿ ನೂರು ಕರ್ಮಕಾಂಡ
ಹೊರಗೆ ಪ್ರಗತಿ ತೋರುವದಲ್ಲ
ಬುದ್ಧ ಬಸವ ಹೆಸರಿನಲ್ಲಿ
ರಾಷ್ಟ್ರ ಕೊಳ್ಳೆ ಹೊಡೆಯುವುದಲ್ಲ
ಗುರು ಲಿಂಗ ಜಂಗಮ ಮರೆತು
ಅಗ್ರಹಾರದ ಸಂಸ್ಕೃತಿಗೆ
ಆಹಾರವಾಗುವುದಲ್ಲ
ಜಾತಿ ಲಿಂಗ ತಾರತಮ್ಯ
ಮಾಡುವವರಿಗೆ
ಛತ್ರಿ ಚಾಮರ ಹಿಡಿಯುವದಲ್ಲ
ವಚನ ಸುಟ್ಟವರ ಜೊತೆಗೆ
ಕೈ ಜೋಡಿಸಿ ಮತವ ಬೇಡುವುದಲ್ಲ
ಕೊರಳ ಲಿಂಗ ಸಾಕ್ಷಿಯಾಗಿ
ಸತ್ಯ ಸಮತೆ ಶಾಂತಿ ಪ್ರೀತಿ
ನುಡಿವ ನುಡಿದಂತೆ
ನಡೆಯುವುದೇ
ಬಸವ ಸಂಸ್ಕೃತಿ ಕಾಣಿರೋ
ಬಸವ ಪ್ರಿಯ ಶಶಿಕಾಂತ
______________________
ಡಾ. ಶಶಿಕಾಂತ ಪಟ್ಟಣ ರಾಮದುರ್ಗ