ಕವನ : ಶರಣು ನಿನಗೆ ಸದ್ಗುರು

Must Read

ಶರಣು ನಿನಗೆ ಸದ್ಗುರು

ಶಿಸ್ತನು ಕಲಿಸಿ,ಅರಿವನು ತುಂಬಿ
ಅರಳಿಸಿ ಮಗುವಲಿ ಪ್ರತಿಭೆಯನು
ಕ್ಷಣ ಪ್ರತಿಕ್ಷಣವೂ ಆತ್ಮಸ್ಥೈರ್ಯವ
ವಿದ್ಯಾರ್ಥಿಗಳಲಿ ತುಂಬುವರು

ಕಲಿಸುತಲನುದಿನ ವಿದ್ಯೆಯ ನಮಗೆ
ಹರಸುವ ಗುರುವೇ ಹರಿ ಸಮವು
ರಚಿಸಲು ಶಿಷ್ಯರ ಭವ್ಯ ಭವಿಷ್ಯವ
ಹರ ಸಾಹಸವ ಪಡುವವರು

ಕ್ಲಿಷ್ಟತೆಯನ್ನು ಸರಳೀಕರಿಸುವ
ಚಾಕಚಕ್ಯತೆಯ ಗುಣದಿಂದ
ದಿನಚರಿಯಂತೆ ಆಟ ಪಾಠವ
ಮಾಡುವ ಕ್ರಮವು ಬಲು ಚೆಂದ

ದುಷ್ಟತೆಯಳಿಸಿ ಶಿಷ್ಟಾಚಾರದ
ಅಂಕುರ ಮೂಡಿಸಿ ಸಲಹುವಿರಿ
ಅಷ್ಟಭಾವದಲಿ ಸಾಷ್ಟಾಂಗ ನಮನವ
ಗೈಯುವೆ ಗುರುಗಳೇ ಹಾರೈಸಿರಿ.

ಶ್ರೀಮತಿ ಕಮಲಾಕ್ಷಿ ಕೌಜಲಗಿ
ಬೆಂಗಳೂರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group