ನವ ದುರ್ಗಾ ಸ್ವರೂಪಿಣಿ
ನವ ದುರ್ಗಾ ಅವತಾರ ತಾಳಿ
ಕೂದಲು ಕೆದರಿ ಕುಣಿವಳು ಕಾಳಿ
ಅಸುರರ ಸಂಹರಿಸಲು ನವಶಕ್ತಿಧಾರಿಣಿ
ದೇವಾನು ದೇವತೆಗಳ ಸ್ವರೂಪಿಣಿ
ಶುಂಭ ನಿಶುಂಭ ಸಂಹರಿಸಲು
ಚಂಡ ಮುಂಡರ ಅಹಂಕಾರ ಅಳಿಸಲು
ಭಂಡಾಸುರನ ವಧೆ ಮಾಡಲು
ರಕ್ತ ಬೀಜಾಸುರನ ರಕ್ತ ಕುಡಿಯಲು
ಕಾಳಿ ದುರ್ಗಾವತಾರ ತಾಳಿ, ನಾಲಿಗೆ ಚಾಚಿದಳು
ಮಹಿಷಾಸುರ ಮರ್ದಿನಿ ಇವಳು
ಸಪ್ತಸತಿ ಪಾರಾಯಣದ ಶ್ರೀದೇವಿ
ಲಲಿತಾ ತ್ರಿಪುರ ಸುಂದರಿ ದೇವಿ
ಖಡ್ಗಮಾಲ ಸ್ತೋತ್ರ ಪಠಿಸಲು
ಲಲಿತಾ ಸಹಸ್ರನಾಮ ಓದಲು
ಭಕ್ತರಿಗೆ ಮೋಕ್ಷ ಕರುಣಿಸುವಳು
ಒಲಿಯುವಳು ದೇವಿ, ಓದಿ ಸೌಂದರ್ಯ ಲಹರಿ
ಅಗ್ನಿಕುಂಡದಲ್ಲಿ ಜನಿಸಿದಳು ಕಾಳಿ ಉಗ್ರ ರೂಪದಲ್ಲಿ
ಅಸುರರನ್ನು ಸಂಹರಿಸುತ್ತಾ ಸಂಹರಿಸುತ್ತ
ಉಗ್ರ ರೂಪಿಣಿಯಾದ ಈಕೆಯ ಹತೋಟಿಗೆ ತರಲು
ಶಿವ, ಉಗ್ರ ರೂಪಿ ಕಾಳಿಯ ಪಾದದಲ್ಲಿ ಮಲಗಿರಲು
ಕಾಳಿಯ ಪಾದ ಶಿವನ ಎದೆಯ ತಾಕಲು
ಸಹಜ ಸ್ಥಿತಿಗೆ ಬಂದಳು ಶಿವೆ, ಶಾಂತಳಾದಳು
ಭಕ್ತರಿಗೆ ಒಲಿಯವಳು ಸಪ್ತಶತಿ ಪಾರಾಯಣ ಮಾಡಲು
ಶ್ರೀಮತಿ ಪಾರ್ವತಿ ದೇವಿ ಎಂ ತುಪ್ಪದ, ಬೆಳಗಾವಿ