Homeಕವನಕವನ : ಅಜರಾಮರ ಮಹರ್ಷಿವರೇಣ್ಯರು

ಕವನ : ಅಜರಾಮರ ಮಹರ್ಷಿವರೇಣ್ಯರು

spot_img

ಅಜರಾಮರ ಮಹರ್ಷಿವರೇಣ್ಯರು

ಡಕಾಯಿತ ದರೋಡೆಕೋರ ರತ್ನಾಕರರು
ಅಗ್ನಿಶರ್ಮ ನಾಮಧಾರಿಯಿವರು//ಪ//

ಕು(ಪ್ರ)ಖ್ಯಾತ ಕಟುಕರ ಸಹವಾಸಪ್ರಿಯರು
ನಾರದರ ಉಪದೇಶ ಪರಿಪಾಲಿಸಿಹರು
ದಿವ್ಯ ರಾಮಮಂತ್ರ ಸತತ ಪಠಿಸಿಹರು
ಉಗ್ರ ತಪವಗೈದು ಮಹಾಜ್ಞಾನಿಯೆನಿಸಿಹರು/1/

ಸಂಸ್ಕೃತ ರಾಮಾಯಣ ಮಹಾಕಾವ್ಯ ಸ್ರಜಿಸಿಹರು
ವಿಶ್ವಕವಿ ಮಹಾಕವಿ ಪಟ್ಟಗಿಟ್ಟಿಸಿಹರು
ಪ್ರಪಂಚದ ಪ್ರಪ್ರಥಮ ಆದಿಕವಿಯಾಗಿಹರು
ಮಹರ್ಷಿ ವಾಲ್ಮೀಕಿ ನಾಮಾಂಕಿತರು/2/

ಕೆಸರಿನ ಕಮಲದಂತೆ ಕಂಗೊಳಿಸಿಹರು
ನೈತಿಕ ಜೀವನ ಮೌಲ್ಯಗಳ ಧಾರೆಯೆರೆದವರು
ಆದಿ ಮಹಾಕಾವ್ಯದ ನೇತಾರ ಅಜರಾಮರರು
‘ಪರಿವರ್ತನೆ ಜಗದ ನಿಯಮ’ ತತ್ವಬಿತ್ತಿಬೆಳೆದಿಹರು/3/

ಗರ್ಭಿಣಿ ಸೀತಾಮಾತೆಯ ಮಹಾ ಪೋಷಕರು
ಲವ-ಕುಶರ ಸರ್ವವಿದ್ಯಾಗುರುವರ್ಯರು
ರಾಮಾಯಣ ಗಾಯನ ನಿಪುಣರನ್ನಾಗಿಸಿಹರು
ಹೆತ್ತಪ್ಪನನು ಲವ-ಕುಶರಿಗೆ ಪರಿಚಯಿಸಿದವರು /4/

ಪ್ರಾಚೇತಸ ಋಷಿವರ್ಯರ ಕುಲದೀಪಕರು
ಇಪ್ಪತ್ನಾಲ್ಕುಸಾವಿರ ಶ್ಲೋಕ ರೂವಾರಿಯಾಗಿಹರು
ಅಪಾರ ಭಾಷೆ ಅನುವಾದಕ್ಕೆ ಪ್ರೇರೇಪಕರು
ಬಹುಭಾಷಾ ಸಂಶೋಧಕರ ಕಣ್ಮಣಿಯಾದವರು/5/


–ಪ್ರೊ.ಶಕುಂತಲಾ.ಚನ್ನಪ್ಪ. ಸಿಂಧೂರ.
ಕವಿಯಿತ್ರಿ, ಸಂಶೋಧಕರು.
ಗದಗ.

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group