ಭೀಕರ ಭೂಕಂಪ
ಏನು ದೈವವಿದು
ನಾವು ಬೆರೆತುಕೊಂಡು
ಹಲವು ದಶಕ
ಬದುಕು ಸಾಗಿಸುತ್ತಿರುವಾಗ
ಇಬ್ಬಾಗಿಸುವ ವಿಧಿಯೊಂದು
ಧಿಡೀರನೇ ಬಂದು ನಿಲ್ಲಬೇಕೆ ?
ಬಾಳ ಪಯಣದಲಿ
ಎಂದೂ ಕಂಡರಿಯದ
ಭೀಕರ ಭೂಕಂಪ !
ಭೂಮಿ ಬಿರಿಯಿತು
ಮೋಡ ನೆಲ ಕಚ್ಚಿತು
ಕೆಂಡದ ಮಳೆ
ಮೌನದಲಿ ಸೂರ್ಯ
ಕಣ್ಣು ಮುಚ್ಚಿದ
ದಿಕ್ಕೆಟ್ಟು ನಿಂತೆವು
ಗೂಡು ತೊರೆದು
ಸಿಹಿ ಸಂಸಾರದ
ಜೋಡು ಹಕ್ಕಿ
ಪುಟ್ಟ ಮರಿ ಅಗಲಿದವು
ಸಾವು ನೋವಿನಲ್ಲಿ
ಅಳಿದುಳಿದವರು ಸುಧಾರಿಸುವುದು
ಬಹು ದೀರ್ಘದ
ಶೋಕ ಕಾವ್ಯ
ಶಿವಶಂಕರನಿಗೆ
ಭಾವ ನಮನ
ಬದುಕು ನೂಕುವುದು
ಅವನ ನೆನಪಿನಲಿ
ಅವನ ನೆನಹಿನಲಿ
_________________________
ಡಾ.ದಾಕ್ಷಾಯಿಣಿ ಮಂಡಿ