ವೈವಿಧ್ಯಮಯ ಪ್ರಕೃತಿ!
ಬಗೆ ಬಗೆಯ ಬಣ್ಣದಲಿ ಸಿಂಗಾರಗೊಂಡಂತೆ ಹಕ್ಕಿಗಳ ಜೋಡಿ ಇಲ್ಲಿ
ಯಾವುದೋ ಸಂಭ್ರಮಕೆ ಸಿದ್ದವಾಗಿಹ ತೆರದಿ ಕಾತರತೆ ಕಣ್ಗಳಲ್ಲಿ
ಬಣ್ಣದ ಕೊಡೆಯನ್ನು ಹಿಡಿದು ನಿಂತಿದೆ ಮರ ತಾನೂ ಪುಳಕದಲಿ ಭಾಗಿಯಾಗಿ
ವರ್ಣ ವೈಭವವನ್ನು ಮುಟ್ಟಿ ಮುದಗೊಳ್ಳುವಂತಿದೆ ತಂಗಾಳಿ ಮೆಲ್ಲ ಸಾಗಿ
ಪ್ರಕೃತಿಯಲಿ ಎಷ್ಟೊಂದು ವೈವಿಧ್ಯತೆಯಿಹುದು ಒಳಗಣ್ಣು ತೆರೆದು ನೋಡೆ
ಸವಿದ ಹೃನ್ಮನಗಳಲಿ ಉಲ್ಲಾಸ ಉಕ್ಕುವುದು ಕುಸಿದು ಬಿಗುಮಾನದ ಗೋಡೆ
*ವಿಶ್ವನಾಥ ಕುಲಾಲ್ ಮಿತ್ತೂರು*

