ಅಗ್ರಹಾರದ ಬಸವಣ್ಣ!
ಇರಬೇಕಿತ್ತು ಬಸವಣ್ಣ
ಅಂಗದ ಮೇಲೆ ಲಿಂಗವ ತೊರೆದು
ಅಗ್ರಹಾರದಲ್ಲಿ ಜಂಗಮನಾಗಿ ,
ಉಳಿಬೇಕಿತ್ತು ಬಸವಣ್ಣ
ಕರಿ ಅಂಗವನ್ನು ಪೂಜಿಸದೆ
ಬಿಳಿ ದಾರವನ್ನು ತೊಟ್ಟ ಬ್ರಾಹ್ಮಣನಾಗಿ.
ಸಂಗಮದ ಮಡಿಲಲ್ಲಿ
ಅಂಗಕ್ಕೆ ಲಿಂಗವ ಕೊಟ್ಟು
ಜಾತಿಯಲ್ಲಿ ನೊಂದ ದೇಹದ ಬೆವರಿನ ಹನಿಗೆ
ಕೊರಳಿಗೆ ಮಡಿಕೆಯ ಕಟ್ಟದೆ ,
ಆತ್ಮದ ಲಿಂಗವ ಕಟ್ಟಿ ,
ಕುಲದ ಸಂಧಿಯಲ್ಲಿ ಬಂಧಿಯಾಗಿದ್ದ
ಮೌಢ್ಯತೆಯನ್ನು ಹಾಗೆ ಬಿಡಬೇಕಿತ್ತು
ಅಗ್ರಹಾರದ ಬ್ರಾಹ್ಮಣನಾಗಿ.
ಇರಬೇಕಿತ್ತು ಬಸವಣ್ಣ
ನೀನು ನಿನಗಾಗಿ
ಅವರಿವರ ಮತಿಯನ್ನು ತೊರೆದು
ಅಗ್ರಹಾರದ ಮಂತ್ರಗಳಲ್ಲಿ ಮೆರೆದು
ಪೂಜಿಸಬೇಕಿತ್ತು ಬಸವಣ್ಣ
ಹರನಲ್ಲದ ಹರಿಯ
ಆಡಂಬರದ ಕಾವಿನಲ್ಲಿ.
ಶರಣರ ಸಂಗಮಕ್ಕೆ ನೆಲೆಯಿಲ್ಲದ ಅಗ್ರಹಾರ
ಹುಟ್ಟು ಶರಣರಲ್ಲಿ ಸಮಗಾರ
ಅಂಗೈ ತುಂಬೆಲ್ಲಾ ಬಸವಣ್ಣನ ಕಾಯಕ
ನಿದ್ದೆಯಲ್ಲಿ ಶ್ರದ್ಧೆ ಕಂಡ ಕಣ್ಣುಗಳು
ಮರಳಿ ಶ್ರದ್ಧೆಯಲ್ಲಿ ನಿದ್ದೆ ಕಾಣುತ್ತಿವೆ.
ಭೋವಿ ರಾಮಚಂದ್ರ
ಹರಪನಹಳ್ಳಿ
8861588118.