ಕವನ : ಚೆಲುವ ಕನ್ನಡ ನಾಡು

Must Read

ಚೆಲುವ ಕನ್ನಡ ನಾಡು

ಚೆಲುವ ಕನ್ನಡ ನಾಡು
ಇದು ಸುಂದರ ಗಂಧದ ಬೀಡು
ಗಾಳಿ ಬೀಸುವ ಹಸಿರು ವನಗಳು
ಕಲೆಯ ನದಿಯ ದೇವಾಲಯ

ಶಾಂತವಾಗಿ ಹರಿವ ಹೇಮಾವತಿ
ಧುಮುಕಿ ನೆಗೆವ ಶರಾವತಿ
ಜೋಗದಲ್ಲಿ ಜಲಪಾತ ಇರುವುದು
ಕೊಡಗಿನಲ್ಲಿ ಕಾವೇರಿ ಹುಟ್ಟುವುದು
ಕಪಿಲೆ ಗೋದಾವರಿ ತುಂಗಭದ್ರೆ
ನಮ್ಮ ದಾಹ ಹಿಂಗಿಸೋ ನದಿಗಳೇ
ನೀವೇ ನಮ್ಮ ಜೀವನ
ಸೃಷ್ಟಿ ಸೊಬಗಿನ ಚೇತನ

ಹಾಸನ ಜಿಲ್ಲೆಯ ಹಲ್ಮಿಡಿ ಶಾಸನ
ಬೇಲೂರು ಶಿಲ್ಪವು ನಿತ್ಯ ನೂತನ
ಮೈಸೂರಿನಲ್ಲಿ ರಾಜರ ಅರಮನೆ
ತ್ಯಾಗ ಅಹಿಂಸೆಯ ಗೊಮ್ಮಟಗಿರಿಯು
ಪಟ್ಟದಕಲ್ಲು ಐಹೊಳೆ ಹಂಪೆ
ಚಿತ್ರದುರ್ಗದ ಕಲ್ಲಿನ ಕೋಟಿ
ಇದುವೇ ನಮ್ಮ ಸಂಸ್ಕೃತಿ
ನಾಡು ನುಡಿಯ ಸಂಸ್ತುತಿ

ಗೊರೂರು ಅನಂತರಾಜು.
ಹಾಸನ
94494 62879

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group