ಕನ್ನಡವೆಂದರೆ ಪಂಚಪ್ರಾಣ
ಅನ್ನ ಅಕ್ಷರ ನೀಡಿ ಸಲುಹುತಿಹ ಕನ್ನಡಾಂಬೆಗೆ
ಜೀವ ಹೋದರೂ ಸರಿ
ತಾಯಿ ಮಾನ ಕಾಪಾಡುವ
ಗಂಡೆದೆಯ ಮಕ್ಕಳೆಂದರೆ ಅವಳಿಗೆ ಪ್ರಾಣ
ತಾಯಿ ಭುವನೇಶ್ವರಿಗೆ ನಾವೆಂದರೆ ಜೀವ
ಅದ್ಕೆ ಕನ್ನಡವೆಂದರೆ ನನಗೆ ಪಂಚಪ್ರಾಣ
ನಾಡಪ್ರೇಮವ ಮರೆತು
ಪರಭಾಷಾ ಪ್ರೇಮ ಮೆರೆಸುವವರಿಗೆ ಅವಳದೊಂದು
ಕಿವಿಮಾತು
ತಾಯಿನುಡಿಯ ಮರೆತ ಜನ ಹೆತ್ತ ತಾಯಿಯನ್ನು ಮರೆಯದಿರುವರೇ?
ಇಲ್ಲಿರುವ ಸೌಭಾಗ್ಯ ಬೇರೆಲ್ಲೂ ಕಾಣೆನು
ಅದ್ಕೆ ಕನ್ನಡವೆಂದರೆ ಪಂಚಪ್ರಾಣ
ನಮ್ಮ ಬದುಕಿಗೆ ಆಧಾರ ಕನ್ನಡ
ಉಸಿರಿಗೆ ಉಸಿರಾಗಿಹುದು ಕನ್ನಡ
ಈ ತಾಯ್ನೆಲ ಅಮೂಲ್ಯ ರತ್ನದ ಗಣಿ
ಏಳೇಳು ಜನ್ಮದಲ್ಲೂ ಈ ನಾಡೇ ನನಗೇ ದೇವಲೋಕ
ಅದ್ಕೆ ಕನ್ನಡವೆಂದರೆ ಪಂಚಪ್ರಾಣ
ಏನಿದ್ದರೇನ್ ಪರನಾಡಿನಲ್ಲಿ ಇಲ್ಲಿರುವ ಸ್ವರ್ಗ ಸುಖ ಬೇರೆಲ್ಲೂ ಸಿಗದು
ನುಡಿದರೆ ಮುತ್ತು ಮಾಣಿಕ್ಯದ ದೀಪ್ತಿಯಂತಿರುವ ಸುಮಧುರ ಭಾಷೆ ನಮ್ಮೀ ಕನ್ನಡ
ಜೇನಿನ ಮಾಧುರ್ಯ ಹಾಲಿನ ಹೊಳೆಯ ಹರಿಸುವ ನುಡಿಯಿದು ಅದ್ಕೆ
ಕನ್ನಡವೆಂದರೆ ಪಂಚಪ್ರಾಣ
ಕನ್ನಡವೆಂದರೆ ಮೂಗು ಮುರಿಯುವುದಲ್ಲ
ಮೊಗವೆತ್ತಿ ನಿಲ್ಲುವುದು
ಕನ್ನಡವೆಂದರೆ ಅಸಹ್ಯವಲ್ಲ
ಸಿಹಿ ಬದುಕಿನ ದೇವನುಡಿ
ಕನ್ನಡ ಸಪ್ತ ಕೋಟಿ ಕನ್ನಡಿಗರ ಹೃದಯ ಸಾಮ್ರಾಟ
ಕನ್ನಡವನುಳಿದು ಬೇರೆ ಬದುಕಿಲ್ಲ
ಅದ್ಕೆ
ಕನ್ನಡವೆಂದರೆ ನನಗೆ ಪಂಚಪ್ರಾಣ
✍️✍️ ಶಿವಕುಮಾರ ಕೋಡಿಹಾಳ, ಕನ್ನಡ ಪ್ರಾಧ್ಯಾಪಕರು ಮೂಡಲಗಿ

