ಸಾಲುಮರದ ತಿಮ್ಮಕ್ಕ ಅಜರಾಮರ !
ಮಕ್ಕಳು ನಿಮಗೆ ಸಾವಿರದ ಸಸಿಗಳು
ನೆಟ್ಟಂತ ಸಸಿಗಳು ಅಮರತ್ವದ ತಾಯಿಗೆ ಮರಗಿದವು
ವೃಕ್ಷಮಾತೆ ತಾಯಿ ನೀವು
ಶತಾಯುಷಿಗಳಾಗಿ ಬಾಳಿದ ಹೆಮ್ಮರ
ಸಾಲುಮರದ ತಿಮ್ಮಕ್ಕಳ ಹೆಸರು ಅಜರಾಮರ ||೧||
ಅಧಿಕವಾಗೋದು ಬೇಡ ತಿಮ್ಮಕ್ಕನ ಹೆಸರಿನಲ್ಲಿ ವೃತ್ತ, ಸ್ಮಾರಕ,
ಅಬ್ಬರ, ಆಡಂಬರದ ಫಲಕ
ವೃತ್ತದಲ್ಲೊಂದು ಮರ, ಸ್ಮಾರಕದ ಸುತ್ತಲಲಿ ನೆಟ್ಟರೆ ನೂರಾರು ಮರ
ಮರದ ಹಸಿರು ಉಸಿರು ನೆರಳಿನೆಸರಲಿ ತಿಮ್ಮಕ್ಕಳ ಹೆಸರು
ಉಳಿಸಿ ಬೆಳೆಸೋಣ ಪರಿಸರದ ಮಾತೆಗೆ ನಿಜಗೌರವ ಸಲ್ಲಿಸೋಣ ||೨||
ಮರದ ಮಡಿಲಲಿ ಮಲಗಿದರು ತಾಯಿ
ಹಸಿರು ಮಾತೆಗೆ ಬಾಯಿಲ್ಲದ ಮರಗಳು ಮರುಗಿದವು
ಇನ್ನಾರು ಬರುವಳು ನಮಗೆ ನೀರುಣಿಸುವ ಮಹಾತಾಯಿ
ಸಾಲುಸಾಲಾಗಿ ನಮ್ಮನ್ನು ನಿಲ್ಲಿಸಿ ಸಂಭ್ರಮವ ಪಡುವವಳು
ತಿಮ್ಮಕ್ಕಳೆಂಬ ಕರುಣಾಮಯಿಗೆ ಕರುನಾಡಲೆ ಮರುಜನ್ಮವಾಗಲಿ
ಲಕ್ಷ ,ಕೋಟಿ ವೃಕ್ಷಗಳು ಸಾಲುಮರದ ತಿಮ್ಮಕ್ಕಳ ಮರುಹುಟ್ಟು ಕಂಡು ಸಂಭ್ರಮಿಸಲಿ ||೩||
ಡಾ. ಆದಪ್ಪ ಮಲ್ಲಪ್ಪ ಗೊರಚಿಕ್ಕನವರ (ಕೂಡಲಸಂಗಮ)
ಇತಿಹಾಸ ಉಪನ್ಯಾಸಕರು
ಪಿ.ಎಸ್.ಸಜ್ಜನ ಕಲಾ ಮಹಾವಿದ್ಯಾಲಯ ಬೇವೂರ. ಬಾಗಲಕೋಟೆ ಜಿಲ್ಲೆ
ದೂ.ಸಂ : ೯೪೮೨೮೧೯೬೦೮

