ಉಸಿರಾದರು
ಮಕ್ಕಳಿಲ್ಲೆಂಬ ಕೂರಗಿನಿಂದ ನೊಂದರು
ಬೇಸತ್ತ ಗಂಡ ಹೆಂಡತಿ ಇಬ್ಬರು
ರಸ್ತೆಬದಿಯಲ್ಲಿ ಗುಂಡಿ ತೋಡಿದರು
ಗಿಡ ನೆಟ್ಟು ನೀರುಣಿಸಿದರು
ಗಿಡ ಬೆಳೆದು ಮರವಾಗುವುದ ಕಂಡರು
ಅವುಗಳನ್ನೇ ಮಕ್ಕಳೆಂದು ನಂಬಿದರು
ಸಂತೋಷದಿ ಕಾಯಕ ಮುಂದುವರಿಸಿದರು
ಎಂಟು ಸಾವಿರ ಮರಗಳ ಬೆಳೆಸಿದರು
ನಾಡಿಗೇ ಹಸಿರಿನಿಂದ ಉಸಿರಾದರು
ಸಾಲುಮರದ ತಿಮ್ಮಕ್ಕ ನೆಂದು ಬಿರುದು ಪಡೆದರು
ವೃಕ್ಷಮಾತೆ ಎಂದು ಹೆಸರಾದರು
ಸಾವಿರಾರು ಪ್ರಾಣಿ ಪಕ್ಷಿಗಳಿಗೆ ನೆಲೆ ನೀಡಿದರು
ಓದು ಬರಹ ಕಲಿತಿಲ್ಲ ಇವರು
ನಿರ್ಮಲ ಮನಸ್ಸುಳ್ಳವರು
ನಿಸ್ವಾರ್ಥ ಸೇವಾ ಭಾವನೆ ಉಳ್ಳವರು
ಯಾರಿಂದಲೂ ಏನನ್ನು ಬಯಸದವರು
ಈ ನಿಸ್ವಾರ್ಥ ಸೇವೆಗೇ ರಾಷ್ಟ್ರಪತಿಯಿಂದ
ಪದ್ಮಶ್ರೀ ಪ್ರಶಸ್ತಿ ಪುರಸ್ಕಾರ ಪಡೆದವರು
ತಮ್ಮ ಆಸ್ತಿಯನ್ನು ಶಾಲೆಗೇ ಧಾರೆ ಎರೆದವರು
ನೀವು ನೆಟ್ಟ ವೃಕ್ಷಗಳು ನಿಮಗಾಗಿ ಕಾಯುತ್ತಿವೆ
ಮತ್ತೂಮ್ಮೆ ಹುಟ್ಟಿ ಬನ್ನಿ ವೃಕ್ಷಮಾತೆ ನಿಮಗೇ ಕೋಟಿ ಕೋಟಿ ನಮನಗಳು
ಸೌಭಾಗ್ಯ ಅಶೋಕ ಕೊಪ್ಪ, ಗೋಕಾಕ

