ಮಸಣದ ಗೋಡೆ
ಮಸಣದ ಗೋಡೆಯ
ಮೇಲೆ ಹೀಗೆ ಬರೆದಿತ್ತು
ಎಲೆ ಮನುಜ
ಕೊನೆಗೆ ನೀನಿಲ್ಲಿಗೆ ಬರಬೇಕು
ಹೊರಗೆ ನೀನೆಲ್ಲವ ಮಾಡಿದೆ
ಬದುಕಿಗೆ ನಿರಂತರ
ಹೋರಾಟ ಸಂಘರ್ಷ
ಜೀವನವಿಡಿ ನಿಲ್ಲಲಿಲ್ಲ
ನಿನ್ನ ಕಸರತ್ತು
ಅಂದು ನಿನ್ನ ಮೆರೆಸಿದ
ನಿನ್ನವರೇ ನಿನ್ನ ಆಪ್ತರು
ನಿನ್ನ ಸುಟ್ಟು ಬಿಟ್ಟರು
ಹರವಿಕೊಂಡಿದ್ದ ಕನಸುಗಳ
ಮಣ್ಣು ಮಾಡಿದರು
ಮನೆಯಾಚೆ ಜಗುಲಿಯಲ್ಲೀಗ
ನಿನ್ನ ಶವಕ್ಕೆ ಅಲಂಕಾರ
ಭವ್ಯ ಮೆರವಣಿಗೆ
ಘೋಷಣೆ ಸಿಡಿ ಮದ್ದು
ಮಸಣದ ಗೋಡೆ ಮತ್ತೆ
ನಿನ್ನ ಸ್ವಾಗತಿಸಿತು
ಎಲೆ ಮನುಜ
ಕೊನೆಗೆ ನೀನಿಲ್ಲಿಗೆ ಬರಬೇಕು
ಬಂದು ಬಿಡು
ಬೆಂದು ಬಳಲಿದ ಜೀವ
ದಣಿವು ಹರಿಯಲಿ
ಶಾಂತಿ ನೆಮ್ಮದಿಯ
ಚಿರ ನಿದ್ರೆಗೆ
_____________________
ಡಾ ಶಶಿಕಾಂತ ಪಟ್ಟಣ ರಾಮದುರ್ಗ

