ಪ್ರೀತಿಗಾಗಿ ನಾನು
ಪ್ರೀತಿ ಹಂಚುತ್ತೇನೆ, ಹಂಚಿಕೊಳ್ಳುತ್ತೇನೆ ಆತ್ಮ ಸಾಕ್ಷಿಯಾಗಿ ಎಲ್ಲರನ್ನು ಪ್ರೀತಿಸುತ್ತೇನೆ !
ಜಾತಿ ಜಾತಿಗಳನ್ನು ಒಗ್ಗೂಡಿಸುತ್ತೇನೆ ಧರ್ಮ ಧರ್ಮಗಳನ್ನು ಬೆಸೆಯುತ್ತೇನೆ !
ಜಾತ್ಯತೀತವಾಗಿ ಎಲ್ಲರ ಹೃದಯದಲ್ಲಿ ಮನೆ ಮಾಡಿಕೊಂಡಿದ್ದೇನೆ !
ಹಣ, ಸಂಪತ್ತು, ಅಂತಸ್ತು, ಅಧಿಕಾರಕ್ಕೆ ಆಸೆ ಪಟ್ಟವನಲ್ಲ!
ಜನರ ಪ್ರೀತಿಯೇ ನನ್ನ ಆಸ್ತಿ ಅದರಲ್ಲಿಯೇ ಕಂಡಿದ್ದೆನೆ ಸಕ್ಕರೆ , ಬೆಲ್ಲ !
ನಾನು ನನ್ನ ಉಸಿರಿರುವರೆಗೂ ಪ್ರೀತಿ ಹಂಚುತ್ತೇನೆ , ಹಂಚಿಕೊಳ್ಳುತ್ತೇನೆ ಎಲ್ಲರನ್ನು ಸದಾ ಪ್ರೀತಿಸುತ್ತೇನೆ !
ಮುನ್ನಾ ಬಾಗವಾನ
ಬೆಳಗಾವಿ

