ದೂರಾದ ಚೆಲುವೆ
ಮನಸಿನಾಳದಲಿ ಬೇರುಬಿಟ್ಟು
ಹೃದಯದಲಿ ಆಸೆಯ ಹಂದರ ಹಚ್ಚಿ
ಕನಸು ಕೈಗೂಡುವ ಮುನ್ನ
ಗಗನ ಕುಸುಮವಾಗಿ
ಚಿತ್ತಚೋರನಿಂದ ದೂರವಾದ ಒಲವೇ
ನಿನ್ನಿನಿಯನ ಬದುಕು ಬೇಡವಾಯಿತೇ?
ಗಾಳಿ ಬೀಸಿದಾಗೊಮ್ಮೆ ನೆನಪು ಉಮ್ಮಳಿಸಿ
ಬಿಕ್ಕುತಿದೆ ಮನ
ಮೋಡ ಕವಿದಾಗೆಲ್ಲಾ ನೆನಪಾಗುತಿದೆ ಮೌನ
ಸಾನ್ನಿಧ್ಯ ಬಯಸಿದೆ
ಹೃದಯ ಹಗುರಾಗಲು
ನಿನ್ನೆಯ ನೆನಪಿಗಿಂತ
ಬಲು ಕಷ್ಟವಿಂದು
ತಾಳಲಾರೆ ವಿರಹ ಕಣ್ಣಂಚಿನಲಿ ಜಾರುತಿದೆ ಬಿಂದು
ಅಂಬರದ ಹೂವಿಗೆ
ಭುವಿಯ ಸ್ಪರ್ಶ ಬೇಡವಾಯಿತೇ?
ತೋಳಬಂದಿಯ ಸಾನ್ನಿಧ್ಯದಲಿ ಲೋಕ ಮರೆಸಿದ್ದೆ
ಕಣ್ಣುಗಳ ನೋಟದಲಿ ಎಲ್ಲಾ ಅರಸಿದ್ದೆ
ಮರಳುಗಾಡಿನಲ್ಲಿ ಅಲೆಯುತ್ತಿದ್ದರೂ
ಓಯಸಿಸ್ ಆಗಿದ್ದೆ
ಜೀವದ ಕಣಿಯಾಗಿದ್ದೆ
ಈ…ಗ…ಈ…ಗ… ಈಗ…
✍️✍️ ಶಿವಕುಮಾರ ಕೋಡಿಹಾಳ ಮೂಡಲಗಿ

