ರೈತನಿವನು
ರೈತನಿವನು ಮೊದಲ ತಾಯಿಯ ಧರೆಯ ಮಗನು
ತಾಯ ಒಡಲಲ್ಲಿ ಬಿತ್ತಿ ಬೆಳೆವ
ಬಲು ಸೊಗಡುಗಾರನು
ವಸುಧೆಯೊಳು ಜನಿಸಿ ವಸುಧೆಯೊಳು ಸೇರುವ
ಮಣ್ಣಿನ ಮಗನು
ಮಮತೆಯಿಂದಲೇ ಸಾಕಿ ಸಲವುವ ಜೋಡೆತ್ತು
ಹೊಡೆವ ಕುಂಟೆಗೆ
ತಲೆಯ ಕೊಟ್ಟವು
ಭಾರ ಎಳೆಯುವ ಮೂಕ ಪ್ರಾಣಿಗಳು
ನೆಲವ ಹದಗೊಳಿಸಿ ನೀರು ಹಾಸಿ
ಬೆಳೆವ ಬಂಗಾರ ಮಣ್ಣು ಕಣ ರಾಶಿ
ಅವರೆ ಅಲಸಂದಿ ಜೋಳ ಗೋದಿ
ಹೆಸರು ಕಡಲೆ ತೊಗರಿ ಮಡಿಕೆ
ಶೇಂಗಾ ಹತ್ತಿ ಗೊಂಜಾಳ ರಾಗಿ
ನಮ್ಮ ರೈತನ ಬದುಕು ಬೆಳೆಯು
ಕುಳಿತು ಓದದೇ ಹಂತಿ ಹಾಡು
ಮೋಡ ಕರಗಿ ಮಳೆಯು ಸುರಿದರೆ
ಮೊಗವು ಅಂದ ನಾಡು ಚೆಂದ
ಹಸಿರು ಹುಲ್ಲು ದನ ಕರು
ಆಡು ಕುರಿ ಆಕಳು ಎತ್ತು ಎಮ್ಮೆಗಳಿಗೆ ಆಹಾರವು
ಹಿಂಡಿ ಬೆಲ್ಲ ದನಕ್ಕೆ ತಿನಿಸಿ ಬೆಳೆಸಿ
ತನ್ನ ಹೆಂಡತಿ ಮಕ್ಕಳು ಸಂಸಾರ
ದಿನದ ಊಟಕೆ ರಾತ್ರಿ ಹಗಲು
ಬೆವರು ಸುರಿಸಿ ದುಡಿದ ಫಸಲಿಗೆ
ಬೆಲೆಯು ಬಾರದೇ
ಚಿಂತೆಯೊಳಗೆ ಸುಡುಗಾಡು
ಸೇರುವ
ರೈತನ ಬದುಕೇ ದುಸ್ತರ
ಸಾವಿತ್ರಿ ಕಮಲಾಪೂರ

