Homeಕವನಕವನ

ಕವನ

spot_img

ಜಗವೆ ಕೂಡಲ ಸಂಗಮ

ಬಸವ ಬಳ್ಳಿ ಲಿಂಗ ಜಂಗಮ
ಜಗವೆ ಕೂಡಲ ಸಂಗಮ.
ಅರಿವೇ ಗುರುವು ,ನಡೆಯು ಲಿಂಗ
ನುಡಿಯೇ ಅಮರ ಜಂಗಮ .

ಅಂಗವಳಿದು ಲಿಂಗವಿಡಿದು
ಶರಣ ಬಾಳು ಸ್ಪಂದನ .
ಲಿಂಗ ಮಜ್ಜನ ಪಾದದುದಕ
ಅರಿವು ಸ್ಪೂರ್ತಿಯ ಸಿಂಚನ .

ಸತ್ಯವೆಂಬುದೆ ನಿತ್ಯ ಪಠಣ,
ನೀತಿ ಪಾಠದ ಮಂಥನ .
ನೆಲದ ಮೇಲೆ ಬೆಳಕು ಚೆಲ್ಲಿದೆ
ಜಗದಿ ನಿತ್ಯ ವಚನ ಚಿಂತನ .

ಒಂದು ಮಾಡಿದ ಹಿರಿದು ಕಿರಿದು
ಸಮತೆವೆಂಬ ದೀಪವು .
ಉಚ್ಚ ನೀಚ ಭೇದ ಹರಿಯಿತು
ಅದುವೇ ಧರ್ಮ ಧೂಪವು .

ಗುಡಿಗಳೆಲ್ಲ ನಲುಗಿ ಹೋದವು
ವೇದ ಶಾಸ್ತ್ರ ಪುರಾಣವು .
ದಲಿತ -ಮಹಿಳೆ -ಅಸಹಾಯಕರು
ಬಸವ ಧರ್ಮದ ಒಡೆಯರು

ಜಿಡ್ಡುಗಟ್ಟಿದ ಕಟ್ಟು ಕಳಚಿತು
ಮುಕ್ತ ವಿಶ್ವದ ಪ್ರೇಮವು .
ಬಸವನುಸಿರೆ ದಿವ್ಯ ಮಂತ್ರವು ,
ಲಿಂಗವಂತ ಸ್ವತಂತ್ರವು

ಡಾ. ಶಶಿಕಾಂತ. ರು. ಪಟ್ಟಣ -ಪೂನಾ

RELATED ARTICLES

Most Popular

error: Content is protected !!
Join WhatsApp Group