ಕವನ : ಸಿದ್ಧಗಂಗೆ ಶಿವಪುರುಷ

Must Read

ಸಿದ್ಧಗಂಗೆ ಶಿವಪುರುಷ

ಸಿದ್ಧಗಂಗೆಯ ಶಿವಪುರುಷ
ಲಿಂಗಾಯತರ ಕಾರಣಿಕ
ಗುರು ಲಿಂಗ ಜಂಗಮ ಕೀರ್ತಿ
ನೀವು ನಾಡಿನ ಜ್ಯೋತಿ

ಹಸಿದ ಮಕ್ಕಳಿಗೆ ಜ್ಞಾನ
ಇರಲು ವಸತಿ ಧ್ಯಾನ
ಅನ್ನವನಿಕ್ಕಿ ಬೆಳಗಿದಿರಿ
ಮಾನವನ ಮಾನ

ನೀವಿಟ್ಟ ಹೆಜ್ಜೆ ನೆಲ
ಸುಕ್ಷೇತ್ರ ಕೈಲಾಸ
ಭಕ್ತರ ಮನದೊಳಗೆ
ವಾಸಿಸುವ ಈಶ

ದಿನ ದಿನವೂ ನೆನೆಯುವೆನು
ಶ್ರೀ ಶಿವಕುಮಾರ ವಸುಧೀಶ
ನಿಮ್ಮ ಪಾವನ ಹರಕೆ
ನಮಿಸುವೆನು ಪರಮೇಶ
_________________________
ಡಾ. ಗೀತಾ ದಾನಶೆಟ್ಟಿ ತುಮಕೂರು

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group