ಭಾವೈಕ್ಯದ ಗುಟ್ಟು
ಕಲ್ಲು ಮಣ್ಣಿಗೆ ಕಂತೆ ಕೊಟ್ಟು
ಅದಕೆ ನೂರು ನಾಮವಿಟ್ಟು
ಜಾತಿಯೆಂಬ ಕಳಸವಿಟ್ಟು
ಮನುಜ ಪಥದ ದಾರಿ ಬಿಟ್ಟು
ಮೌಲ್ಯ ತತ್ವಗಳನು ಸುಟ್ಟು
ಮೃದು ಭಾವಗಳಿಗೆ ಪೆಟ್ಟು
ದೂರ ತಳ್ಳು ಕ್ರೋಧ ಸಿಟ್ಟು
ಬದುಕ ಬೇಡ ದ್ವೇಷ ನೆಟ್ಟು
ಅಪ್ಪಿಕೋ ಎಲ್ಲರನ್ನೂ ಇಷ್ಟ ಪಟ್ಟು
ಬೆಳೆಸು ಭಾವೈಕ್ಯದ ಗುಟ್ಟು
ಸ್ನೇಹ ಪ್ರೀತಿಗೆ ಕೈ ಕಟ್ಟು
ಸುಖದ ಯಶಕೆ ಬೆನ್ನ ತಟ್ಟು
________________________ಡಾ. ಗೀತಾ ದಾನಶೆಟ್ಟಿ ಬಾಗಲಕೋಟೆ

