ಶ್ರದ್ಧೆ
ಶ್ರದ್ಧೆ ಎಂದರೆ ಕೇವಲ ನಂಬಿಕೆ ಅಲ್ಲ,
ಸಾಧನೆಯ ಕೀಲಿ ಕೈ ಆಗಿದೆಯಲ್ಲ
ಹೃದಯದಿಂದ ಹೊಮ್ಮುವ ಶಕ್ತಿ ಎಲ್ಲ
ಕಣ್ಣಿಗೆ ಕಾಣದ ಅದ್ಭುತ ಅನುಭವದ ಬೆಲ್ಲ
ಹೆಜ್ಜೆಗೆ ದಿಕ್ಕು ತೋರುವ ಬೆಳಕ
ಸಾಧನೆಯ ಹಾದಿಯ ದೀಪಿಕೆ
ಶ್ರದ್ಧೆಯೇ ಧೈರ್ಯದ ನೆರಳು.
ಸೋಲಿನ ಕ್ಷಣದಲ್ಲಿ ಕುಗ್ಗದ ಹೊನಲು
ಅದು ಹೊಸ ಪ್ರೇರಣೆ
ಮಣ್ಣಿನಲ್ಲಿ ಯಶಸ್ಸಿನ ಬೀಜ
ಫಲದ ನಿರೀಕ್ಷೆ ಇಲ್ಲದ ನಂಬಿಕೆ
ಶ್ರಮದ ಜೊತೆಗಿನ ಶಕ್ತಿ
ಕಾಲದಲ್ಲಿ ಸುವರ್ಣ ಫಲ
ಶ್ರದ್ಧೆಯಿಲ್ಲದ ಜ್ಞಾನ ನಿರ್ಜೀವ,
ಸಾಧನೆಗೂ ಕರ್ಮ ಪವಿತ್ರ.
ಜೀವನದ ಪ್ರತಿ ಹಂತದಲ್ಲೂ
ಅದೇ ಅಮೂಲ್ಯ ಆಭರಣ.
ಮನುಷ್ಯನನ್ನು ಎತ್ತರಕ್ಕೆ
ಅವನ ಶಕ್ತಿ ಅಲ್ಲ, ಭಾಗ್ಯವೂ ಅಲ್ಲ,
ಅವನೊಳಗಿನ ಶ್ರದ್ಧೆಯೇ
ಭಾವ ಭವಿಷ್ಯವನ್ನು ರೂಪಿಸುವ
ಸ್ವಯಂ ಶಿಲ್ಪಿ
ಶೃದ್ಧೆ ತಪಸ್ಸು
ಅಂತರಂಗದ ಚೈತನ್ಯದ ಚಿಲುಮೆ
_________________________
ಡಾ.ತಾರಾ ಬಿ ಎನ್ ಧಾರವಾಡ

