ಕವನ : ಅಪರಾಜಿತೆ

Must Read

ಅಪರಾಜಿತೆ

ತರುಣಿಯ ತೋಳ್ಬಂದಿಗೂ
ತುಮುಲವಿದೆ
ತಿಳಿದವರಾರು?

ಕಣ್ಣ ಕುಲುಮೆಯಲಿ ದಿನವು
ಕುದಿಯುವ
ಕುವರಿಯಾರೋ ಕೇಳಿದವರಾರು?

ಮಂದಸ್ಮಿತೆ
ಮಲ್ಲೆ ಮುಡಿಯುವಳು
ಮಧುವನಕೆ ಕರೆಯುವಳು

ಮೂಗುನತ್ತಲ್ಲೂ ಸೆಳೆಯುವಳು
ಮಂದಬೆಳಕಲ್ಲೂ ಮಿನುಗುವಳು
ಮದನಕೂಟದರಸಿಯಾಗುವಳು

ಜುಮುಕಿ ಲೋಲಾಕು ವಯ್ಯಾರ
ಜರಿಸೀರೆ ತೊಟ್ಟ ಮಂದಾರ
ಜೋಕುಮಾರರ ಚಕೋರ

ಗುಂಗುರು ಕೂದಲ ಸುಳಿಯಲಿ
ಗಮ್ಯದರಿವು ಮರೆಸುವ
ಗಂಧವತಿಯ ಘಮಲೆ ಅಮರ

ನೂರು ನರಕವ ದಾಟಿದ
ನಾಲ್ಕು ಲೋಕವ ಸುತ್ತಿದ
ನಡುಬೀದಿ ಹೂವಿಗೆ ಮರಣವಿಲ್ಲ

ಉಪಮೆಗಳ ಕಟ್ಟಿ ಅವಳ
ಉಡಿ ತುಂಬುವಂತಿಲ್ಲ
‘ಉದರ ನಿಮಿತ್ತ’ ಮರೆಯುವಂತಿಲ್ಲ

ಹಗಲಿನಲಿ ತಲೆಗೇರಿ
ಹೆಜ್ಜೆ ತಪ್ಪಿಸುವ ಕಟು
ಹೆಂಡದಂತವಳು

ಕೆಂದಾವರೆ ಮೊಗದ
ಕನ್ನಿಕೆ ಕೊನೆಯಿರದ
ಕತೆಯಂತವಳು

ಅಂಧಕಾರದಲಿ ಅರಳಿದ
ಅಪರಾಜಿತೆಗೆ ಬಲೆಯ
ಬೀಸುವವರಾರು?

ತಾ ಸೋತು ಸೋಲಿಸುವ
ಕಲೆಯ ಕಲಿತವಳೆದುರು
ಗೆದ್ದು ಬರುವವರಾರು?

ಹಳದಿ ಕಂಗಳ ಕೊಳೆ ತೊಳೆದು ಹಸುಗೂಸಿನಂತೆ ಮಡಿಲಲ್ಲಿ ಮಲಗಿಸಿಕೊಳ್ಳಿ

ತುಸು ಸಮಯ ನೀಡಿ
ಅವಳೆದೆಯ ಬೇಗುದಿ
ಕೇಳಿಸಿಕೊಳ್ಳಿ

ಕೊಟ್ಟರೂ ಕೊಡಬಹುದು ದೇಹ ದೇಗುಲದೊಳು ಬಚ್ಚಿಟ್ಟ ಗರ್ಭಗುಡಿ ಬೀಗ

ತೆರೆದು ನೋಡಲು ದೇವ
                 ಕಾಣುವನಾಗ !                          

ಡಾ.ಭವ್ಯ ಅಶೋಕ್ ಸಂಪಗಾರ್

LEAVE A REPLY

Please enter your comment!
Please enter your name here

Latest News

ಪರಿಸರ ಸಂರಕ್ಷಣೆ ಮಾಡಿ, ಮಾನವಕುಲ ರಕ್ಷಿಸಿ ; ಸಾಹಿತಿ ಭೇರ್ಯ ರಾಮಕುಮಾರ

ಮೈಸೂರು - ಪರಿಸರ ಸಂರಕ್ಷಣೆ ಮಾಡದಿದ್ದರೆ ಮಾನವನ ವಿನಾಶ ಖಚಿತ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಭೇರ್ಯ ರಾಮಕುಮಾರ್ ಅತಂಕ...

More Articles Like This

error: Content is protected !!
Join WhatsApp Group