ಕವನ : ರಜಿಯಾ ಬಾನೋ

Must Read

ರಜಿಯಾ ಬಾನೊ 

ರಜಿಯಾ ನನ್ನ ನಿನ್ನ
ಸ್ತ್ರೀ ಯಾಗಿ ಬಾಳುವ ಜೀವನ
ಒಂದೇ ಅಲ್ಲವೇ?
ನಾನು ತಿನಿಸುತ್ತೇನೆ ಭಕ್ಕರಿ ಗೋವಿಗೆ
ನೀನು ಫಕೀರನಿಗೆ
ನಮ್ಮ ತನವಕಳೆದು
ಪುರುಷನ ನಿತ್ಯಭೋಗಕ್ಕೆ
ಹೆರುವ ಹೆರಿಗೆನೋವು
ಇಬ್ಬರಿಗದೂ ಒಂದೇ
ಸಾಯುವಾಗ ನಿನಗೂ
ಕುಡಿಸುತ್ತಾರೆ, ಪವಿತ್ರ ಜಲ
ನನಗೂ ಗಂಗಾಜಲ
ನಿನ್ನ ಪಯಣ ಕಬರಸ್ತಾನಕೆ
ನನ್ನದು ಸ್ಮಶಾನಕೆ
ಈ ಎಲ್ಲಾ ಸಮಾನತೆಗಳಿದ್ದು
ವಿಷಮತೆ ಏಕೆ?
ಏಕೆ ಯುದ್ಧ? ಸಾಯುವರಾರು?
ನಿನ್ನ ಗಂಡ , ನನ್ನ ಮಗ
ನಾವೇ ತಬ್ಬಲಿ ಗಳು
ಸಾಕು ಏಳಿನ್ನು
ತೆಗೆದೊಗೆಯಬೇಕು ಸ್ತ್ರೀಗೆ
ಹೇರಿದ ಮುಖವಾಡ
ನಂದಿಸಬೇಕಿದೆ ಕೋಮುವಾದದ ಜ್ವಾಲೆ
ಒಗ್ಗಟ್ಟಿನಲ್ಲಿ ಕಾಯ೯ ಸಾಧಿಸಬೇಕಾಗಿದೆ
ಭಾರತಾಂಬೆಯ ಹೊಸ ಮುಖದ
ಪರಿಚಯ ಮಾಡಿಸ ಬೇಕಿದೆ
ಏಳಿನ್ನು ಎದ್ದೇಳು ಏಳು.

ರಾಧಾ ಶಾಮರಾವ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group