- Advertisement -
ಅಲ್ಲ ಅವರು ನನ್ನವರು.
ಅಲ್ಲ ಅವರು ನನ್ನವರು
ಸತ್ಯ ಸಮಾಧಿ ಮಾಡಿದವರು.
ಜಾತಿ ದ್ವೇಷ ಬಿತ್ತುವವರು .
ಮಾತು ತಪ್ಪಿ ನಡೆಯುವವರು.
ಧರ್ಮ ದೇವರು ಮಾರಿದವರು.
ಕಾವಿ ಹೊತ್ತು ತಿರುಗುವವರು
ಹಿಂಸೆ ಸುಲಿಗೆ ಮೆರೆಸುವವರು.
ಜನರ ಕೊಂದು ಬದುಕುವವರು.
ಗಡಿ ಸೀಮೆಯ ಜಗಳದವರು.
ನದಿ ವ್ಯರ್ಥಹರಿಸುವವರು.
ಗೋಡೆ ಕೋಟೆಯ ಕದನದವರು.
ಹಸಿವು ಕಂಡು ಮರುಗದವರು .
ಕ್ರೂರತನಕೆ ಕುಣಿಯುವವರು.
ಸಮತೆ ಹೆಜ್ಜೆ ಹಾಕದವರು
ಶಾಂತಿ ಗೀತೆ ಹಾಡದವರು.
ವೇಷ ಹಾಕಿ ಬದುಕಿದವರು
ಬುದ್ಧ ಬಸವನ ನೆನೆಯದವರು.
ಅಲ್ಲ ಅವರು ನನ್ನವರು..
————————————
ಡಾ.ಶಶಿಕಾಂತ.ಪಟ್ಟಣ -ರಾಮದುರ್ಗ