ಕವನ : ಮೌನರಾಗ ಹೊಸದಾಗಿದೆ……

Must Read

ಮೌನರಾಗ ಹೊಸದಾಗಿದೆ…..

ಮನದಾಳದಲಿ ಮೂಡಿಬಂದಿದೆ ಹೊಸರಾಗ
ಪಿಸುಗುಟ್ಟುತಲಿ ಉಲಿಯುತಲಿದೆ ಮೌನರಾಗ

ಬಾಳಿನಾ ತೋಟದಲಿ ಅರಳಿದ ಹೂವು
ಘಮ್ಮೆಂದು ಸೂಸುತಿದೆ ತನದೆ ಸುವಾಸನೆ
ಬಾಡುವೆನೆಂದು ಹೇಳುವುದಿಲ್ಲ ಎಂದೂ
ಇರುವಷ್ಟು ಸಮಯ ಖುಷಿ ನೀಡುವುದು ಕಾಣಾ

ಕಳೆದಾ ಸಮಯ ಕಂಡಾ ಕನಸು
ಮರೀಚಿಕೆಯಾಗಿ ನಿಂತಿದೆಯಲ್ಲಾ
ಮನದಾಳದ ಮಾತು ಹೃದಯದಾ ತುಡಿತ
ಮೌನವಾಗಿ ಬಿಕ್ಕಳಿಸುತಿದೆಯಲ್ಲಾ..

ನಾನು ನೀನು ಕಳೆದಾ ಕ್ಷಣಗಳಲಿ
ಪಿಸುಮಾತು ಮೌನರಾಗವೇ ಜಾಸ್ತಿ
ಅದರಲೂ ತುಡಿತಗಳೇ ನಮ್ಮ ಆಸ್ತಿ
ಹೇಗೆ ಕಳೆದು ಹೋಯ್ತು ಹಗಲು ಹೊತ್ತು.

ಕತ್ತಲಾವರಿಸಿದ ಮನಕೆ ಮುದ ನೀಡದು ಬಯಕೆ
ಹೊಸತು ಹಳೆಯದರ ಭರಾಟೆಯಲಿ
ಬಾಳಬಂಡಿ ಕೀಲಿಮಣಿ ಕಳಚಿಬಿದ್ದಿತು…
ಒಡೆದು ಹೋಯಿತು ಬದುಕು.. ..

ಹೊಸದಾಗಿ ಹೊಸರಾಗ ಮೂಡುತಲೆ
ಮೌನರಾಗ ಮೌನವಾಗಿಯೇ
ರೋಧಿಸುತ್ತಲೇ ಇದೆ‌ ಇನ್ನೂತನಕ….
ಮನದಿ ಪಿಸುಮಾತು ಬಿಕ್ಕುತಲೇ ಹುಸಿ ನಕ್ಕು

ಶ್ರೀಮತಿ. ಲಲಿತಾ ಮ. ಕ್ಯಾಸನ್ನವರ
ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ,
ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಬೆಳಗಾವಿ ನಗರ
9035527366
8073893993

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group