Homeಕವನಕವನ : ಹೊನ್ನಗನ್ನಡಿಯ ಚೆಲುವೆ

ಕವನ : ಹೊನ್ನಗನ್ನಡಿಯ ಚೆಲುವೆ

ಹೊನ್ನಗನ್ನಡಿಯ ಚೆಲುವೆ

ನೇಸರನ ಹೊನ್ನಿನ ಕಿರಣಗಳ ಬಳಿಯಲಿ
ಲೋಕ ಮರೆತು ಇನಿಯನ ನೆನಪಿನಲಿ ತಣ್ಣಗೆ ಕುಳಿತಿರುವ
ಹೊನ್ನಗನ್ನಡಿಯ ಚೆಲುವೆಯೇ ಓದಿ
ಹೇಳು ಒಮ್ಮೆ
ಸಾಗರದಲೆಗಳ ಎದೆಯ ಮೇಲೆ ನೀ ಬರೆದ ಒಲವಿನೋಲೆ

ಮೇಘದೂತನ ಸಂದೇಶವಂದು ಕಾಳಿದಾಸನ ಲೀಲೆ
ಇನ್ಯಾವ ಕವಿಯ ಸೃಷ್ಟಿಗೆ ಮುನ್ನುಡಿ ಬರೆಯುತಿರುವೆ ಬಾಲೆ
ಪ್ರಣಯದೇವತೆಯಂತೆ ಬೆಳಗಿಸಿದ ನೇಸರನದೊಂದು ಅದ್ಭುತ ಕಲೆ
ಅಲೆಗಳನ್ನೇ ಸಮ್ಮಾನಿಸಿಬಿಡು ಹಾಕಿ ಕೊರಳಿಗೆ ಮುತ್ತಿನಮಾಲೆ

ಗಗನವನ್ನೇ ನಾಚಿಸುತಿದೆ ಹೊಳೆಯುವ
ಶ್ವೇತವರ್ಣದ ಧಿರಿಸು
ಕನಕಶಿಲೆಗಳ ಮೇಲಿನ
ಹೊನ್ನ ಬಿಂಬದ ಮೇಲೇಕೆ ಮುನಿಸು
ಸಾರಿ ಸಾರಿ ಹೇಳಿಬಿಡು
ನಿನ್ನಂದವಾಗಬೇಕು ಜಗದ ಕನಸು
ಪ್ರೇಮಭಿಕ್ಷೆ ಬೇಡಿದವನ ಮೇಲಿಲ್ಲವೇಕೆ ನಿನ್ನ ಮನಸು

ಜಗವೇ ಕುಣಿಯುತಿದೆ ಪ್ರೀತಿಯಿಂದಲೆ ಜಾಣೆ
ಪ್ರೇಮದಮೃತ ತುಂಬಿದ ಜಗವೇ ಒಂದು ಅರಮನೆ
ನಿನಗಾಗಿ ಕಾಯುತಿರುವ
ಹೊನ್ನಕನಸುಗಳ
ಚೆಲುವ ಎಲ್ಲಿಹನೋ ಕಾಣೆ
ಬರಬಹುದು ಸದಾ ನುಡಿಸುತಿರು ವಿರಹರಾಗದ ವೀಣೆ

✍️ ಶಿವಕುಮಾರ ಕೋಡಿಹಾಳ ಮೂಡಲಗಿ

RELATED ARTICLES

Most Popular

error: Content is protected !!
Join WhatsApp Group