ಅತ್ತ ಇತ್ತ ನೋಡುತಿರುವೆ
—————————–
ಅತ್ತ ಇತ್ತ ಸುತ್ತ ಸುಳಿದು
ಕತ್ತು ಎತ್ತಿ ನೋಡುತಿರುವೆನು
ಎತ್ತ ಹೋದೆ ನಿ ಬಸವ ಪ್ರಭುವೆ?
ಹೊತ್ತು ಹೋಗದು ನೀನು ಇರದೆ
ಬತ್ತಿ ಹೋಗಿದೆ ಜಂಗಮ
ಪುಣ್ಯ ಪುರಾಣ ಪ್ರವಚನಗಳ
ಮಾರಿಕೊಂಡರು ದಲಾಲರು
ಕೊಳಕು ಮನಸು ಹೊಲಸು ದೇಹ
ಮಾಡಬೇಕೆ ಪಾದ ಪೂಜೆ ?
ಸತ್ತು ಹೋದರು ತತ್ವ ನಿಷ್ಠರು
ಭ್ರಷ್ಟ ಮಾತೆ ಅಕ್ಕ ಶರಣರು.
ಆನೆ ಏರುವ ಶ್ವಾನ ಮೂಳೆಗೆ
ಪಟ್ಟ ಕಟ್ಟಿತು ಬಸವ ಪೀಠಕೆ
ನಾಯಿ ಕೋತಿ ಹದ್ದಿನಂತೆ
ಮುಸುರೆ ಮಾ೦ಸಕೆ ನಿತ್ಯ ಕದನ
ಗುರು ವಿರಕ್ತರು ಕಳ್ಳ ಕಾಕರು
ಬಸವ ಉಧ್ಯಮ ದಂಧೆಕೋರರು
ಸುಲಿಗೆ ವಂಚನೆ ಜನರ ಶೊಷಣೆ
ವಿಷಯಲಂಪಟ ಮಠದ ಪೋಷಣೆ
ವಚನ ತಿದ್ದುವ ಮಾತೆ ಅಕ್ಕ
ಬಸವ ಮೂರ್ತಿಗೆ ಮೂರ್ಖ ಶರಣ
ವಚನ ಹೋದವು ವೇದ ಪಾಠ
ನಿನ್ನ ಹೆಸರಲಿ ಕೊಳ್ಳೆ ಕಾಟ
ಎತ್ತ ಹೋದೆ ನಿ ಸತ್ಯ ಬಸವಾ
ಮರ್ತ್ಯ ಲೋಕದ ಸ್ತುತ್ಯ ಪ್ರಭುವೆ .
ಬಸವ ಭಕ್ತರ ಕೋಪ ತಾಪಕೆ
ಉರಿದು ಹೋಗುವರು ಕ್ಷುದ್ರರು
ಬನ್ನಿ ಬನ್ನಿ ಬಸವ ಭಕ್ತರೆ .
ಬಸವನ್ಹೊತ್ತು ಬದುಕ ಬನ್ನಿ
ಸತ್ಯ ಶಾಂತಿ ವಿಶ್ವ ಪ್ರೇಮ
ಬೆಸುಗೆ ಗೊಳ್ಳಲಿ ಮನುಜ ಪಥವು .
———————————-
ಡಾ. ಶಶಿಕಾಂತ .ಪಟ್ಟಣ – ರಾಮದುರ್ಗ
Must Read
- Advertisement -
- Advertisement -
More Articles Like This
- Advertisement -