- Advertisement -
ಬಸವ ಸೇನೆಯ ಜಟ್ಟಿಗಳು
ಬಸವ ಸೇನೆಯ ಜಟ್ಟಿಗಳು
ನಾವು ಗಣಾಚಾರಕೆ ಮೆಟ್ಟಿಲು.
ಗುಡುಗು ಹಾಕುವ ಹುಲಿಗಳು
ನಾವು ಶರಣ ಧರ್ಮಕೆ ತೊಟ್ಟಿಲು.
ಕಳ್ಳ ಅಕ್ಕನ ತೆರೆದು ತೋರುವ
ಬಸವನಾಡಿನ ಕಲಿಗಳು.
ಅಣ್ಣ ಶರಣರ ಸೋಗು ವೇಷಕೆ
ಕೊನೆ ಹೇಳುವ ವೀರರು.
ಮಾತು ಮಾತಿಗೆ ವಚನ ತಿದ್ದುವ
ಮಂದ ಮಾತೆಯ ತಿದ್ದುವವರು.
- Advertisement -
ಕಾವಿ ತೊಟ್ಟು ಕಳ್ಳರಾದ
ಮಠದ ಸ್ವಾಮಿಗೆ ಮೋಕ್ಷವು.
ಕಳೆದು ಹೋದ ಕಲ್ಯಾಣಕೆ
ಮತ್ತೆ ಕಹಳೆ ನಗಾರಿಯು .
ಬನ್ನಿ ಬಸವ ಬಂಧುಗಳೇ
ಕ್ರಾಂತಿ ಗೀತೆ ಹಾಡ ಬನ್ನಿ .
ಹಾದಿ ಬೀದಿಗೆ ವಚನ ಹಾಡಿ
ಜಾತಿ ಭೇದ ಕಿತ್ತೊಗೆಯ ಬನ್ನಿ
ಸಮಾನತೆಯ ಕಾಣ ಬನ್ನಿ
ಬನ್ನಿ ಬಸವ ಬಂಧುಗಳೇ
ಒಂದಾಗ ಬನ್ನಿ.
ಅಪ್ಪ ಬಸವನ ಮಹಾ ಮನೆಯ
ಮತ್ತೆ ಮರ್ತ್ಯದಿ ಕಟ್ಟ ಬನ್ನಿ .
———————————-
ಡಾ ಶಶಿಕಾಂತ ,ಪಟ್ಟಣ -ಪೂನಾ