ಕವನ: ದೇಶ-ಭಾಷೆ

0
819

ದೇಶ-ಭಾಷೆ

ನಮ್ಮ ದೇಶ ಭಾರತ
ನಮ್ಮ ಭಾಷೆ ಕನ್ನಡ
ಭಾರತ ಮಾತಾ ಕಿ ಜೈ !
ಕನ್ನಡಾಂಬೆಗೂ ಜೈ !
ದೇಶ ಭಾಷೆ ನಮ್ಮ ಬದುಕು
ನಮಗದು ಬೇಕೇ ಬೇಕು
ಮತ್ತೆ ತಗಾದೆ ತೆಗೆಯುವದ್ಶಾಕೆ

ಹಿಂದಿ ಹೇರುವ ಬಾಬೂಗಳೆ
ನಮ್ಮದು ಒಂದಷ್ಟು ನೀವೂ ಕೇಳಿ
ಕನ್ನಡವೂ ರಾಷ್ಟ್ರೀಯ ಭಾಷೆ
ನಮ್ಮ ಭಾಷೆಗಿದೆ ಪರಿಪಕ್ವತೆ.

ಒಳ ಹೊರ ಆಂದ ಚಂದ
ಕೇಳಬೇಕೆ ಅದೇನು ಆನಂದ
ಪ್ರಾಚೀನದ ಪಾವಿತ್ರ್ಶ ಹೊಂದಿ
ಶ್ರೀಗಂಧ ಲೇಪಿತ, ಪರಿಮಳ ಭೂಷಿತ
ಶಾಸ್ತ್ರೀಯ ಜಾತ ನಮ್ಮ ಭಾಷೆ
ಚೆಲ್ವ ಕನ್ನಡ ನಮ್ಮ ನಾಡ ನುಡಿ
ನಮ್ಮ ಭಾಷೆ ನಾಟ್ಶ ಮಯೂರಿ
ಭುವನ ಸುಂದರಿ ಗರಿಗೆದರಿ

ನುಲಿಯುತ್ತ ಉಲಿಯುತ್ತ
ನಲಿಯುತ್ತ ಬೆಳೆಯುತ್ತ ಬಂದಿದೆ
ನಮಗದು ಅಂದವೋ ಅಂದ
ಕನ್ನಡವೆನೆ ಮಮ ಸಂಭ್ರಮವು

ನಿಮಗೆ ಹಿಂದಿ ಬೇಕಾ ಕಲಿಯಿರಿ
ನಮಗೆ ಬೇಡವಾದ್ರೆ
ಬೇಕೋ ಬೇಡವೋ ಆಯ್ಕೆಗಿದೆ
ಒತ್ತಾಯ ನೀತಿ ಬಿಟ್ಟುಬಿಡಿ

ಸಂವಿಧಾನವೂ ನಮಗಿದೆ
ರಾಷ್ಟ್ರ ಭಾಷೆ ಕನ್ನಡವೂ
ನೀವೂ ಅರಿಯಬೇಕು
ಭಾಷೆ ಭಾವನಾತ್ಮಕ ಮುಟ್ಟ ಬೇಡಿ
ಬಾಂಧವ್ಶ ಬೆಸೆಯಲು ಹೆಜ್ಜೆ ಹಿಡಿ

ನಮ್ಮ ಅಭಿಮಾನ ಸ್ಪಷ್ಟಪಡಸ್ತೀವಿ
ನಮ್ಮ ದೇಶ ಎಷ್ಟು ಪ್ರೀತಿಸ್ತೀವಿ
ನಮ್ಮ ಭಾಷೆ ಅಷ್ಟೇ ಪ್ರೀತಿಸ್ತೀವಿ…
ಪುಷ್ಪೋದ್ಯಾನದ ಸೌಂದರ್ಯೀಕರಣಕ್ಕೆ
ಬಗೆಬಗೆಯ ಪುಷ್ಪಗಳೇ ಮೂಲ ಕಾರಣ
ಭಾಷೆಗಳೆಂಬ ಪುಷ್ಪಗಳು ಅರಳಿ ನಿಲ್ಲಲಿ

ಭಾಷೆ ಅವರವರ ಜೀವನ, ಅಸ್ಮಿತೆಯೇ ಸೈ
ನಾವೂ ಕನ್ನಡಕ್ಕೆ ಎತ್ತುವೆವು ಕೈ, ಜೈ ಜೈ
ವಂದೇ ಮಾತರಂ, ಭಾರತ ಮಾತಾ ಕಿ ಜೈ


ಅಮರ್ಜಾ
ಅಮರೇಗೌಡ ಪಾಟೀಲ ಜಾಲಿಹಾಳ
ಕುಷ್ಟಗಿ