ಕವನ: “ತುಳಸಿ ಮಾತೆ”

Must Read

“ತುಳಸಿ ಮಾತೆ”

ಕೃಷ್ಣನ ನೆನೆವುದೆ ಭಾಗ್ಯವು ನಮಗೆ

ತುಳಸಿಯ ಪೂಜಿಸೆ ಸಂತೃಪ್ತಿಯೆಮಗೆ ಪ

ಗೋಪಾಲ ಕಂದನ ಪೂಜಿಸ ಬನ್ನಿರೆ

ಹೆಂಗಳೆಯರೆಲ್ಲ ಬೇಗ ತುಳಸಿ ತನ್ನಿರೆ ಅ.ಪ

ಜಗದಲಿ ನಾನಾ ಕಲಹ ಕಾರ್ಮೋಡ

ಕಲಿಯುಗದಲಿ ಕಟ್ಟೆಯೊಡೆದಿದೆ ನೋಡ

ನಾನು ನನ್ನದೆಂಬ ಅಹಂಭಾವ ಬಿಡ

ಭವ ಬಂಧನ ಬಿಟ್ಟು ಭಕ್ತಿಯಲಿ ಹಾಡ ೧

ಕರುಣಾಮಯಿ ಮಾತೆ ತುಳಸಿಮಾತೆ

ಸಕಲರಿಗೂ ಮಂಗಲ ಭಾಗ್ಯವಿಧಾತೆ 

ದಯೆ ತೋರೆಂದು ಬೇಡೋಣ ಮತ್ತೆ

ಜನುಮ ಜನುಮಕೂ ತುಳಸಿ ಮಾತೆ ೨

ಮನೆಮನೆಯಲಿ ಮಹಿಳೆಯರ ಮಾತೆ

ಮಂಗಲ ಸೂತ್ರ ಕಾಪಾಡು ನೀ ಮಾತೆ

ಸಂಸಾರ ಸುಖಶಾಂತಿ ಬೇಡುವರು ಮಾತೆ

ಕರುಣಾಮಯಿ  ಕಾಯೆ ತುಳಸಿ ಮಾತೆ ೩


ಸಂತೋಷ್ ಬಿದರಗಡ್ಡೆ

ಶಿಕ್ಷಕ, ಸಾಹಿತಿ ಹಾನಗಲ್.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group