ಕವನ: ವೈಣಿಕನ ಕೈ ಸೇರಿದ ವೀಣೆ…

0
392

 

ವೈಣಿಕನ ಕೈ ಸೇರಿದ ವೀಣೆ.. 

ವೈಣಿಕನ ಕೈ ಸೇರಿದ ವೀಣೆಯಿಂದ

ಹೊಮ್ಮುವುದು ಸುಮಧುರ ಸಂಗೀತವು

ಕಲೆಗಾರನ ಕುಂಚದಲಿ ಗೀಚಿದ ಗೆರೆಗಳು

ಆಗುವುದು ಸುಂದರ ಚಿತ್ರಗಳು

ದರ್ಜಿಯ ಕೈ ಸೇರಿದ ತುಂಡು ಬಟ್ಟೆಯು

ರೂಪುಗೊಳ್ಳುವುದು ಅಂದದ ಉಡುಪಾಗಿ

ಕಮ್ಮಾರನ ಬಡಿತದಿಂದ ಮಾತ್ರ ಕಬ್ಬಿಣವು

ರೂಪುಗೊಳ್ಳಲು ಸಾಧ್ಯ ಆಯುಧಗಳಾಗಿ

ಕುಂಬಾರನ ಕರಸ್ಪರ್ಶದಿಂದ ಮಣ್ಣಿನ ರೂಪವು-

ಬದಲಾಗಿ ಪಾತ್ರೆ, ಹಣತೆಗಳಾಗುವುದು

ಸೋನಗಾರನ ಕೈಚಳಕದಿಂದ ಮಣ್ಣಾಗಿದ್ದ-

ಚಿನ್ನವು ಚಂದದ ಆಭರಣಗಳಾಗುವುದು

ಕಡಲಿನಾಳವನು ಸೇರಿದ ಮಳೆಹನಿ ಮಾತ್ರವೇ

ಕಣ್ಮನ ಸೆಳೆಯುವ ಮುತ್ತಾಗುವುದು

ಸಪಾತ್ರವನು ಸೇರಿದರೇನೇ ವಸ್ತುಗಳಿಗೆ-

ನಿಜವಾದ ಯೋಗ್ಯತೆಯು ಬರುವುದು..


ರೇಣುಕಾ ಸುಧೀರ್ಅರಸಿನಮಕ್ಕಿ
ಬೆಳ್ತಂಗಡಿ