ಒಂದು ಕನಸಿನ ಕಥೆ
ಅಣ್ಣಾ ಕೇಳು, ನಾನೊಂದು ಕನಸ ಕಂಡೆ
ಸರ್ವರಿಗೂ ಉದ್ಯೋಗ, ಅರೋಗ್ಯ, ಸ್ವಂತಮನೆ
ದೃಷ್ಟಿ ಹಾಯಿಸಿದ ಕಡೆಯಲ್ಲೆಲ್ಲ ಶಾಂತಿ, ಸಮೃದ್ಧಿ
ಇತ್ತ ನೋಡಿದರತ್ತ ಹಸಿರ ಸಾಮ್ರಾಜ್ಯ
ಎಲ್ಲೆಲ್ಲೂ ಸತ್ಯ, ಶಾಂತಿ, ಅಹಿಂಸೆ ಗಳನ್ನು ರಾಜ್ಯಭಾರ..
ಅಂಗರಕ್ಷಕರೇ ಇಲ್ಲದ, ಹಿಂಬಾಲಕರಿಲ್ಲದ ಸಚಿವರು,
ಕಾಲ್ನಡಿಗೆಯಲ್ಲೇ ಸಂಚರಿಸುವ ಜನ ಪ್ರತಿನಿಧಿಗಳು,
ದ್ವಿಚಕ್ರ ವಾಹನದಲ್ಲೇ ಓಡಾಡುವ ಜಿಲ್ಲಾ ಮುಖ್ಯಸ್ಥರು,
ಜಾತಿಯೇ ಇಲ್ಲದ ನವ ಸಮಾಜ ಕಂಡೆ.. ಸಂತಸದಿ ಕುಣಿದಾಡಿದೆ..
‘ಬಡವರ ಅನ್ನ ದೋಚಿದ್ದ
ನ್ಯಾಯಬೆಲೆ ಅಂಗಡಿ ಮಾಲೀಕನ ಬಂಧನ ‘
ಟಿವಿ ಸುದ್ದಿ ಕೇಳಿ ಬೆಚ್ಚಿ ಕಣ್ತೆರೆದೆ,
ಅಯ್ಯೋ!! ಚಳಿಗಾಲದ ಕನಸೇ ??
ಕಂಡ ಕನಸು ನನಸಾಗುವುದೇ?
ಆದರ್ಶ ಸಮಾಜ ರೂಪುಗೊಳ್ಳುವುದೇ?
ಯೋಚಿಸುತ್ತಾ ಮತ್ತೆ ಪವಡಿಸಿದೆ..
*ಭೇರ್ಯ ರಾಮಕುಮಾರ್, ಮೈಸೂರು