spot_img
spot_img

ಹದವಾದ ಭಾವಗಳಿಂದ ಹೊರಹೊಮ್ಮಿದ ಕಾವ್ಯ ಸದಾ ಜೀವಂತ: ವೆಂಕಟೇಶ ಸಿಂಧಿಹಟ್ಟಿ

Must Read

- Advertisement -

ಬೈಲಹೊಂಗಲ: ಕವಿ ತನ್ನ ಮನದ ಹದವಾದ ಭಾವಗಳನ್ನು ಹದವಾಗಿ ಅಭಿವ್ಯಕ್ತಗೊಳಿಸಿದಾಗ ಅಂತಹ ಕಾವ್ಯ ಜನರ ಹೃದಯ ತಲುಪುತ್ತದೆ ಎಂದು ಬೆಳಗಾವಿ ವಿಭಾಗದ ಕಾರ್ಮಿಕ ಉಪ ಆಯುಕ್ತರಾದ ವೆಂಕಟೇಶ ಸಿಂಧಿಹಟ್ಟಿ ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತು ಬೈಲಹೊಂಗಲ ತಾಲೂಕು ಘಟಕ ಹಾಗೂ ಶ್ರೀ ಖಾಸ್ಗತೇಶ್ವರ ಶಿಕ್ಷಣ ಸಂಸ್ಥೆ ಇವರ ಸಹಯೋಗದಲ್ಲಿ ಪಟ್ಟಣದ ಸೊಗಲ ರಸ್ತೆಯಲ್ಲಿರುವ ತಾಲೂಕಾ ಪಂಚಾಯತಿ ಸಭಾಭವನದಲ್ಲಿ ರವಿವಾರ ನಡೆದ ಕಿತ್ತೂರು ಉತ್ಸವದ ನಿಮಿತ್ತ ಏರ್ಪಡಿಸಿದ ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡ ಸಾಹಿತ್ಯ ಅನೇಕ ಕವಿರತ್ನಗಳಿಂದ ಅತ್ಯಂತ ಶ್ರೀಮಂತವಾಗಿದ್ದು ಉದಯೋನ್ಮುಖ ಕವಿಗಳು ಕನ್ನಡ ಸಾಹಿತ್ಯದ ರಸಾಸ್ವಾದನೆ ಮಾಡಬೇಕು ಎಂದು ಅವರು ಅಭಿಪ್ರಾಯ ಪಟ್ಟರು.

ಆಶಯ ನುಡಿಗಳನ್ನಾಡಿದ ಬೈಲಹೊಂಗಲ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎನ್.ಆರ್.ಠಕ್ಕಾಯಿ ಅವರು ನಿರ್ವಿಕಲ್ಪ ಭಾವದಿಂದ ಹುಟ್ಟಿದ ಕವಿತೆ ಮಾತ್ರ ಸದಾ ಜೀವಂತವಾಗಿರಬಲ್ಲುದು ಎಂದು ಹೇಳಿದರು. ಆತ್ಮತೃಪ್ತಿಯ ಜೊತೆಗೆ ಸಮಾಜದ ಕಳಕಳಿಯನ್ನು ಕಾಪಾಡುವ ಕಾವ್ಯ ಅತ್ಯಂತ ಶ್ರೇಷ್ಠವಾದದ್ದು. ಭಾವ, ಭಾಷೆ, ಲಯಗಳಿಂದ ಓದುಗನ ಮನದಲ್ಲಿ ಚಿರಸ್ಥಾಯಿಯಾಗಿ ನಿಲ್ಲುವ ಗಟ್ಟಿ ಕಾವ್ಯ ರಚಿಸುವ ಶಕ್ತಿಯನ್ನು ಕವಿಗಳು ಹೆಚ್ಚಿಸಿಕೊಳ್ಳಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಬೈಲಹೊಂಗಲದ ಶ್ರೀ ಖಾಸ್ಗತೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಕಾಶಿನಾಥ ಬಿರಾದಾರ ಮಾತನಾಡಿ ಯುವ ಜನತೆ ಕನ್ನಡ ಸಾಹಿತ್ಯದ  ಬಗ್ಗೆ ಒಲವು ಹೆಚ್ಚಿಸಿಕೊಳ್ಳಬೇಕು ಎಂದರು. ಕವನ ಬರೆಯುವುದು ಮನಸ್ಸಿಗೆ ನೆಮ್ಮದಿಯನ್ನು ತಂದುಕೊಡುವ ಉತ್ತಮ ಹವ್ಯಾಸ ಎಂದು ಹೇಳಿದರು. ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಂಗಲಾ ಶ್ರೀಶೈಲ ಮೆಡಗುಡ್ಡ ಅಧ್ಯಕ್ಷತೆ ವಹಿಸಿ ಮಾತನಾಡಿ ಉತ್ತಮ ರೀತಿಯಲ್ಲಿ ಕವಿಗೋಷ್ಠಿಯನ್ನು ಆಯೋಜಿಸಿ ನಾಡಿನ ಬೇರೆ ಬೇರೆ ಕಡೆಗಳಿಂದ ಕವಿಗಳನ್ನು ಒಂದೆಡೆ ಸೇರಿಸಿದ್ದು ಶ್ಲಾಘನೀಯ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

- Advertisement -

ಖ್ಯಾತ ಆಕಾಶವಾಣಿ-ದೂರದರ್ಶನ ಕಲಾವಿದರಾದ ಸಿ.ಕೆ ಮೆಕ್ಕೇದ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಬೆಳಗಾವಿ ಜಿಲ್ಲಾಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಂಟಿ ಕಾರ್ಯದರ್ಶಿಗಳಾದ ಶಿವಾನಂದ ಕುಡಸೋಮಣ್ಣವರ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷರಾದ ಎಸ್.ಡಿ.ಗಂಗಣ್ಣವರ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳಾದ ಬಿ.ಎನ್.ಕಸಾಳೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ರಾಜ್ಯದ ವಿವಿಧ ಭಾಗಗಳಿಂದ 80 ಕ್ಕೂ ಹೆಚ್ಚು ಕವಿಗಳು ಭಾಗವಹಿಸಿದ್ದರು. ಡಾ.ಎಸ್.ಎಸ್.ದೇವಲಾಪೂರ, ಗಂಗಾ ಚಕ್ರಸಾಲಿ, ಡಾ. ನಾಗೇಂದ್ರ ಚಲವಾದಿ, ಭಾರತಿ ಕಿತ್ತೂರಮಠ, ಡಾ. ಫಕೀರನಾಯ್ಕ ಗಡ್ಡಿಗೌಡರ, ಎಮ್.ಆರ್.ಪಾಟೀಲ, ಶಿವಪುತ್ರಪ್ಪ ನಿಂ. ಮುದಕವಿ, ಅಮಜವ್ವ ಭೋವಿ, ಸರಸ್ವತಿ ಬಾರಿಮರದ, ಗಜಾನಂದ ಸೂರ್ಯವಂಶಿ, ಸೋಮಲಿಂಗಪ್ಪ ತುಪ್ಪದ, ಸವಿತಾ ಪಾಟೀಲ, ಮಲ್ಲಿಕಾರ್ಜುನ ಹಾರುಗೊಪ್ಪ, ಮಹಾಂತೇಶ ರಾಜಗೋಳಿ, ಜಯಶ್ರೀ ವಾಲಿಶೆಟ್ಟರ, ಸಿದ್ದು ನೇಸರಗಿ, ಸಿದ್ದಲಿಂಗಯ್ಯ ಹಿರೇಮಠ, ಶಿಲ್ಪಾ ಸು.ಉಪಾಧ್ಯೆ, ಚಂದ್ರಶೇಖರ ಕೊಪ್ಪದ, ಯಲ್ಲನಗೌಡ ಫ. ಶಾನಭೋಗ, ಎಂ.ಡಿ. ಅಲಾಸೆ, ಅವಿನಾಶ ಸೆರೆಮನಿ, ಅಣ್ಣಯ್ಯಸ್ವಾಮಿ ಸಂಬಾಳಿಮಠ, ಬಿ.ವಿ.ಪತ್ತಾರ, ಸಾಕ್ಷಿ ಚಂ. ನಾಗಣ್ಣವರ, ಬೀರಪ್ಪ ಡಿ. ಡಂಬಳಿ, ಸಾಕ್ಷಿ ಹಿರೇಮಠ, ಶೈಲಶ್ರೀ ಗು. ಜೋಶಿ, ತನುಜಾ ಬಡಿಗೇರ, ಗುರುಪ್ರಸಾದ ವೈದ್ಯ, ರಾಜೇಶ್ವರಿ ಸೊಗಲದ, ಪವಿತ್ರಾ ದಳವಾಯಿ, ಜಾನಕಿದೇವಿ ಭದ್ರಣ್ಣವರ, ಮಹಾದೇವಿ ಪಾಟೀಲ, ಬಸವರಾಜ ಆರ್. ಹೊನಗೌಡರ, ಸುರೇಶ ಶಿವಪ್ಪನವರ, ಬಸಪ್ಪ ಹೊ. ಶೀಗಿಹಳ್ಳಿ, ಎಸ್.ಎಮ್.ಹಳಿಂಗಳಿ, ಫಕೀರಪ್ಪ ಸೋಮನ್ನವರ, ಬಸವಣ್ಣೆಪ್ಪ ಕಾದ್ರೊಳ್ಳಿ, ಮನು ವೈದ್ಯ, ಮಲ್ಲಿಕಾರ್ಜುನ ಚ. ಕುರಿ, ಈರಪ್ಪ ಯ. ಅಬ್ಬಾರ, ಐಶ್ವರ್ಯ ತುರಮಂದಿ, ಇಬ್ರಾಹಿಂ ಚಾಂದಖಾನವರ, ಪುಷ್ಪಾ ಕುಂಬಾರ, ಮಹಾಂತೇಶ ಜಮಳೂರಮಠ, ಈರಣ್ಣ ಅಗಳಗಟ್ಟಿ, ಶಿವಾನಂದ ಮಾವಿನಕೊಪ್ಪ, ಮಾ.ಮಹೇಶ ಮಲೆಯೂರು, ಪ್ರತಿಭಾ ಚಂ. ಭಾಸ್ಕರಿ, ಅರುಣಕುಮಾರ ರಾಜಮಾನೆ, ಬಸವರಾಜ ಘೋಡಗೇರಿ, ವಿಶ್ವನಾಥ ಟಿ.ಎಸ್, ಸನಗೌಡ ಸಂಗನಗೌಡರ, ಶೈಲಜಾ ಎಸ್. ಮಠಪತಿ, ಕೌಶಲ್ಯ ಗಂ. ಸರದಾರ, ಯಮುನಾ ಕಂಬಾರ, ವಿರುಪಾಕ್ಷ ಕಮತೆ, ಮಲ್ಲಿಕಾರ್ಜುನ ಎಚ್. ಕಡಕೋಳ, ಶೈಲಜಾ ಮ. ತಳವಾರ, ಬಸಪ್ಪ ಬಿ.ಇಟ್ಟಣ್ಣವರ, ಶ್ವೇತಾ ವಿ. ಪಟ್ಟಣಶೆಟ್ಟಿ, ಸುನಂದಾ ಭರಮನಾಯ್ಕರ, ರಾಜಶೇಖರ ಸರದೇಸಾಯಿ, ಮಾರುತಿ ಭೀ.ದೇಸಾಯಿ, ದುರ್ಗಪ್ಪ ಎಚ್.ಪೂಜಾರಿ, ಮಂಜುನಾಥ ಮಡಿವಾಳರ, ನಾಗರಾಜ ಪಿ. ಗೋವಿ ಕವಿ-ಕವಯತ್ರಿಯರು ಕವನ ವಾಚಿಸಿದರು.

ಕಾರ್ಯಕ್ರಮದಲ್ಲಿ ಬೈಲಹೊಂಗಲ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷರಾದ ಮಹೇಶ ಕೋಟಗಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಪ್ರೇಮಾ ಅಂಗಡಿ, ಶಶಿಕಲಾ ಯಲಿಗಾರ, ಶ್ರೀಕಾಂತ ಉಳ್ಳೇಗಡ್ಡಿ, ಸಂತೋಷ ಹಡಪದ, ಲಕ್ಷ್ಮೀ ಮುಗಡ್ಲಿಮಠ, ಸಂತೋಷ ಪಾಟೀಲ ಉಪಸ್ಥಿತರಿದ್ದರು. ಕವಿಗಳು, ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನೇತ್ರಾವತಿ ಬಿಸಲೊಳ್ಳಿ ಕನ್ನಡ ಗೀತೆಗಳನ್ನು ಹಾಡಿದರು. ದುಂಡಪ್ಪ ಗರಗದ ಸ್ವಾಗತಿಸಿದರು. ಕಾಶವ್ವ ನರಗುಂದ ಪ್ರಾರ್ಥಿಸಿದರು. ರಾಜು ಹಕ್ಕಿ ನಿರೂಪಿಸಿದರು. ರಾಮಕೃಷ್ಣ ಹೋಟಕರ ವಂದಿಸಿದರು.

- Advertisement -
- Advertisement -

Latest News

ಅಂಕೋಲೆಯ ಉಪ್ಪಿನ ಸತ್ಯಾಗ್ರಹಕ್ಕೆ ತೊಂಬತ್ನಾಲ್ಕು ವರ್ಷ

ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸ ಬಹು ವರ್ಣರಂಜಿತ. ಈ ಬೃಹತ್ ಚರಿತ್ರೆಯಲ್ಲಿ ಅಂಕೋಲೆಗೆ ಒಂದು ಪ್ರತ್ಯೇಕ ಅಧ್ಯಾಯವೇ ಇದೆ. ಈ ಅಧ್ಯಾಯ ಒದಗಿ ಬಂದದ್ದು ಇಡೀ...
- Advertisement -

More Articles Like This

- Advertisement -
close
error: Content is protected !!
Join WhatsApp Group