ಕವನ: ಅಕ್ಷರ ಲೋಕದ ಚಕ್ರವರ್ತಿ

Must Read

ಅಕ್ಷರ ಲೋಕದ ಚಕ್ರವರ್ತಿ

ಸಾಸಿರ ಅಕ್ಷಿಗಳೊಳ್ ಎನ್ನ ತಿದ್ದಿದ ಸಿದ್ದಾಂತಿ
ವಿದ್ಯೆಯ ಪರ್ವತವನು ಸೀಳಿದ ಬೆಳಕು
ಸಮುದ್ರ ಮಥನದ ಸಿಹಿ ಅಮೃತ ನೀನು
ಕಲಿಸಿದ ಗುರುವಿಗೆ ಸಾವಿರದ ಶರಣು

ಕಾಲಜ್ಞಾನ ಬರೆದ ಮಹಾ ಯೋಗಿ ನೀನು
ಶಬ್ದ ಭಂಡಾರದ ಮಹಾ ಸಂಪುಟ ನೀನು
ಅರಿವು ಹೆಚ್ಚಿಸಿ ಅಜ್ಞಾನ ಅಳಿಸಿದ ಸುಧಾರಕ
ಅಂಧ ಲೋಕದಿ ಬೆಳ್ಳಿ ಕಿರಣ ಕಾಣಿಸಿದವನು

ಸದ್ಗುಣಗಳ ಬಿತ್ತಿ ದೈವತ್ವದ ಹಣ್ಣುಂಡವನು
ಅಕ್ಷರಗಳ ಜೋಡಿಸಿ ಜೀವದ ಹಸಿ ಚಿತ್ತಾರದ
ಅದೃಷ್ಟ ರೇಖೆ ಎಳೆದ ರೇಖಾಗಣಿತಜ್ಞ ನೀನು
ಸಮಾನತೆಯ ಹರಿಕಾರ ಶಿಸ್ತಿನ ಸಿಪಾಯಿ ನೀನು

ಬರಹ ಲೋಕದ ಜಾದೂಗಾರ ಅಕ್ಷರಗಳ
ಅಬ್ಬರಕೆ ಎನ್ನ ಕೊಂಡೊಯ್ದ ಕನಸುಗಾರ
ಕಗ್ಗಲ್ಲಿನ ಮೇಲೆ ಅಳಿಸಲಾಗದ ಶಿಲಾಶಾಸನ
ರಚಿಸಿದ ಲಿಪಿಕಾರ ನೀನು ನನ್ನ ಗುರು

ಎನ್ನೊಡಲ ಮಧ್ಯೆ ಅಂಕುರಿಸಿದ ಕಾವ್ಯ
ಲೋಕಕ್ಕೆ ಏಣಿ ಹಾಕಿದ ಅಭಿಯಾಂತ್ರಿಕ
ಎನ್ನ ಪಾಲಿನ ಮಹಾವಿಶ್ವವಿದ್ಯಾಲಯ
ಅರಿವಿನ ಗುರುವಿಗೆ ಕೋಟಿ ನಮನ

ಕಾಣದ ಲೋಕದಿ ಎಲ್ಲವನೂ ತಿಳಿದು
ನಿನ್ನೆಲ್ಲ ವಿದ್ಯೆಯ ನಿಸ್ವಾರ್ಥದಿ ಎನಗೆ
ಧಾರೆಯೆರೆದ ವಿದ್ಯಾ ಜಲಪಾತ ನೀನು
ಸಪ್ತ ಸಾಗರದ ಸ್ವಾತಿ ಮುತ್ತು ನೀನು


ಇಂಗಳಗಿ ದಾವಲಮಲೀಕ

Latest News

ಡಾ.ಮಹಾಂತೇಶ ಬೀಳಗಿ ಯುವಕರಿಗೆ ಸ್ಫೂರ್ತಿ – ಮೌಲಾಲಿ ಆಲಗೂರ

ಸಿಂದಗಿ: ಸ್ಪೂರ್ತಿದಾಯಕ ಮಾತುಗಳಿಂದ ಲಕ್ಷಾಂತರ ಸ್ಪರ್ಧಾತ್ಮಕ ಓದುಗರ ಕೀರ್ತಿ ಹೆಚ್ಚಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕ, ಐಎಎಸ್ ಅಧಿಕಾರಿ ಮಹಾಂತೇಶ...

More Articles Like This

error: Content is protected !!
Join WhatsApp Group