Homeಕವನಕವನ: ಹೆಣ್ಣು ಪ್ರಪಂಚದ ಕಣ್ಣು

ಕವನ: ಹೆಣ್ಣು ಪ್ರಪಂಚದ ಕಣ್ಣು

ಹೆಣ್ಣು ಪ್ರಪಂಚದ ಕಣ್ಣು

ಹೆಣ್ಣು..ಹೆಣ್ಣೆಂದೇಕೆ
ಮುಖ ಮುರಿಯುವಿರಿ..
ತಾಳ್ಮೆಯ ಮತ್ತೊಂದು ಹೆಸರೇ ಹೆಣ್ಣು..
ಅಡುಗೆ ಮನೆಯಲಿ ರುಚಿಯಾದ ಸ್ವಾದ
ಮಾಡುವ ಊಟ-ತಿಂಡಿಗಳಲೇ ಆಯುರ್ವೇದ ,
ಎಲ್ಲ ಗತ ನೆನಪುಗಳ ಕ್ಯಾಲೆಂಡರ್ !!
ಇನ್ನೊಬ್ಬರ ಕಷ್ಟಕೆ ಮರುಗುವಾ ;
ಪತಿ, ಮಕ್ಕಳು, ಮೊಮ್ಮಕ್ಕಳ ಪ್ರೀತಿಗೆ ಕರಗುವಾ ,
ಹೆಣ್ಣು ಈ ಜಗದ ಕಣ್ಣು..

ಆದಿಕಾಲದಿಂದಲೂ ಯಾರದೋ ಸ್ವಾರ್ಥಕೆ ,
ಮಾತೃವಾಕ್ಯ ಪರಿಪಾಲನೆಗೆ ಐವರ ಪತ್ನಿಯಾದಳು,
ಯಾರದೋ ಜೂಜಿಗೆ ಪಣವಾದಳು ,
ಪತಿಯ ಅನುಮಾನ ಪರಿಹಾರಕೆ ಅಗ್ನಿಪ್ರವೇಶಿಸಿದಳು,
ಯಾರದೋ ಶಾಪಕೆ ಕಲ್ಲಾಗಿ
ರಾಮನ ಆಗಮನಕೆ ಕಾದಳು..
ಅಂದಿನ ನಿನ್ನ ತಾಳ್ಮೆಗೆ ಓ ಹೆಣ್ಣೇ ನಿನಗೊಂದು ನಮಸ್ಕಾರ..

ಹೆಣ್ಣು ಪ್ರಧಾನಿ,ರಾಷ್ಟ್ರಪತಿ,ಆಡಳಿತಗಾರ್ತಿ,
ವೈದ್ಯೆ,ವಕೀಲೆ,ವಿಮಾನಚಾಲಕಿ,
ಕಾನೂನು ಹೋರಾಟಗಾರ್ತಿ,ಪರಿಸರ ಚಿಂತಕಿ, ರಾಷ್ಟ್ರ ಕಾಯುವ ಸೈನ್ಯಾಧಿಕಾರಿ..
ನಿನ್ನ ಕರ್ತೃತ್ವಶಕ್ತಿಗೆ ,
ರಾಷ್ಟ್ರ ಪ್ರೇಮಕ್ಕೆ
ನಿನಗಿದೋ ಅಭಿವಂದನೆ..

ಅಡುಗೆ ಮನೆಯಿಂದ ,
ವಿಶ್ವ ಕಟ್ಟುವವರೆಗೆ ಎಲ್ಲೆಡೆಯೂ
ಹೆಣ್ಣಿನ ಸಾಧನೆ ಅಪಾರ, ಅಮೂಲ್ಯ,
ಹೆಣ್ಣೆಂದು ಮೂಗು
ಮುರಿಯದೇ
ಸಮಾನ ಅವಕಾಶಗಳ ನೀಡೋಣ,
ಹಳದಿ ಕಣ್ಣುಗಳ ತ್ಯಜಿಸಿ,
ಅಜ್ಜಿಯಾಗಿ, ಮಾತೆಯಾಗಿ,
ಮಗಳಾಗಿ, ಸಹೋದರಿಯಾಗಿ
ಅವಳಿಗೆ ಗೌರವ ತೋರೋಣ ,
ಸಮಾನ ಅವಕಾಶದ ವಿಶ್ವ ಕಟ್ಟೋಣ.

(ವಿಶ್ವ ಮಹಿಳಾ ದಿನದ ಅಂಗವಾಗಿ ರಚಿಸಿದ ಕವನ)


ಡಾ.ಭೇರ್ಯ ರಾಮಕುಮಾರ್
ಸಾಹಿತಿಗಳು, ಪತ್ರಕರ್ತರು

RELATED ARTICLES

Most Popular

error: Content is protected !!
Join WhatsApp Group